Latest

ಕೆರೆ ಹೂಳೆತ್ತುವ ಸ್ಥಳಕ್ಕೆ ಎಲ್.ಕೆ. ಅತೀಕ ಭೇಟಿ

     

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹೊಸವಂಟಮುರಿ ಪಂಚಾಯತ ವ್ಯಾಪ್ತಿಯ ಭೂತರಾಮನಟ್ಟಿ ಗ್ರಾಮದಲ್ಲಿ ಕೆರೆ ಹೂಳು ಎತ್ತುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಶ್ರಮದಾನ ಮಾಡಿದರು.
ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಅವರು, ಸಾರಿಗೆ, ಕುಡಿಯುವ ನೀರು, ವೇತನ ಸೇರಿದಂತೆ ವಿಶೇಷ ಚೇತನ ಕೂಲಿ ಕಾರ್ಮಿಕರಿಗೆ ಕೂಲಿಯಲ್ಲಿ ಸಡಿಲಿಕೆಯನ್ನು ವಿಚಾರಿಸಿದರು. ಒಟ್ಟು 323 ಕೂಲಿಕಾರ್ಮಿಕರು ಹಾಜರಿದ್ದರು.
ಇದಕ್ಕೂ ಮೊದಲು ಬಸ್ತವಾಡ ಗ್ರಾಮದ ಪಂಚಾಯತ ಕಟ್ಟಡ, ಶಾಲಾ ಆವರಣ ಗೋಡೆ, ರಸ್ತೆ ಕಾಮಗಾರಿ, ಚರಂಡಿ, ಅಂಗನವಾಡಿ ಕಟ್ಟಡ, ಗೃಹ ಖಾತರಿ (ಬಸವ ವಸತಿ) ಸ್ವಚ್ಛ ಭಾರತ ಮಿಷನ್ ಮತ್ತು ಕೆ.ಕೆ. ಕೊಪ್ಪ ಗ್ರಾಮದ ಬನಾನಾ ಪ್ಲಾಂಟೇಶನ್‌ಗೆ ಭೇಟಿ ನೀಡಿ ಪರಶೀಲಿಸಿದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button