Latest

ಗದಗ ಬಳಿ ಅಪಘಾತದಲ್ಲಿ 6 ಜನ ಸಾವು

*

ಪ್ರಗತಿವಾಹಿನಿ ಸುದ್ದಿ, ಗದಗ

ಗದಗ ಜಿಲ್ಲೆ ಅಡವಿ ಸೋಲಾಪುರ ಸಮೀಪ ಭಾನುವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ 6 ಜನ ಸಾವಿಗೀಡಾಗಿದ್ದಾರೆ.
ಮದುವೆ ಮುಗಿಸಿ ಬರುತ್ತಿದ್ದವರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಮತ್ತೊಂದು ದಿಕ್ಕಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೆ 6 ಜನ ಸಾವಿಗೀಡಾದರು. ನಾಲ್ವರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಅರುಣಕುಮಾರ ಬೆಟಗೇರಿ(27), ಸಿದ್ದಲಿಂಗೇಶ ಕೋರಿಶೆಟ್ಟರ(20), ಮನೋಜಕುಮಾರ ಕರಡಿಗುಡ್ಡ(28), ಆನಂದ ಬೆಟಗೇರಿ(29), ಅಮೃತ ಲಾತೂರಕರ(೨7) ಹಾಗೂ ಚನ್ನು ಬಡದ (28) ಸಾವಿಗೀಡಾದವರು.

Home add -Advt

Related Articles

Back to top button