Latest

ದಾಸರು, ಶರಣರು ಮತಾಂತರವನ್ನು ತಡೆದರು- ಕುಸನೂರು

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಕ್ತಿ ಮಾರ್ಗವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ವಾತಾವರಣ ನಿರ್ಮಾಣವಾಗಿತ್ತು. ನಮ್ಮ ಸಮಾಜದ ಕೆಳವರ್ಗದ ಜನ ಇಸ್ಲಾಂ ಧರ್ಮಾಕ್ಕೆ ಮತಾಂತರಗೊಳ್ಳಲಾರಂಭಿಸಿದ್ದರು. ಈ ಸಂದರ್ಭದಲ್ಲಿ ದಾಸರು, ಶರಣರು ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿಗಳ ಕುರಿತು ಜ್ಞಾನವನ್ನು ನೀಡುವುದರ ಮೂಲಕ ಮತಾಂತರವನ್ನು ತಡೆದರು ಎಂದು ಹಿರಿಯ ಲೇಖಕ, ಚಿತ್ರಕಲಾವಿದ ಚಂದ್ರಕಾಂತ ಕುಸನೂರ ಹೇಳಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸವದತ್ತಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ವಾಯ್. ಎಂ. ಯಾಕೊಳ್ಳಿಯವರ ಮೂರು ಕೃತಿಗಳ ಬಿಡುಗಡೆ ಸಮಾಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಯಾಕೊಳ್ಳಿಯವರ ಮೂರು ಕೃತಿಗಳನ್ನು ಬಿಡುಗಡೆಗೊಳಿಸಿದ ಡಾ. ಬಸವರಾಜ ಜಗಜಂಪಿ, ಆರೋಗ್ಯಕರ ವಿಮರ್ಶೆಯಾಗಬೇಕು. ಇಂದು ಪೂರ್ವಾಗ್ರಹ ಪೀಡಿತ ವಿಮರ್ಶೆ ಕಂಡು ಬರುತ್ತಿದ್ದು ಬರವಣಿಗೆಗೆ ಗುಂಡುಗಳಿಂದ ಉತ್ತರ ನೀಡುವ ವಾತಾವರಣ ನಿರ್ಮಾಣವಾದುದು ಖೇದದ ಸಂಗತಿ ಎಂದರು.
ಡಾ. ಎಚ್. ಬಿ. ಕೋಲಕಾರ ಕಾವ್ಯ ಸಂಗಾತಿ, ಪ್ರೊ. ವಿ.ಬಿ. ಹಿರೇಮಠ ಕನಕ ಸ್ಮೃತಿ ಹಾಗೂ ಸುರೇಶ ಹೆಗಡೆ ನಾದದ ನದಿಯೊಂದು ಹರಿದಾಂಗ ಕೃತಿಗಳನ್ನು ಪರಿಚಯಿಸಿದರು.
ಮಾಧುರಿ ಜೋಶಿ ಹಾಗೂ ಸಂಗಡಿಗರ ಪ್ರಾರ್ಥನಾಗೀತೆಯೊಂದಿಗೆ ಕಾರ‍್ಯಕ್ರಮ ಪ್ರಾರಂಭವಾಯಿತು. ಕಸಾಪ ಸವದತ್ತಿ ತಾಲೂಕಾಧ್ಯಕ್ಷರಾದ ಸಿ. ಬಿ. ದೊಡಗೌಡರ ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತವಿಕ ನುಡಿಗಳನ್ನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಚುಸಾಪ ತಾಲೂಕಾಧ್ಯಕ್ಷರಾದ ಜಿ. ವಾಯ್. ಕರಮಲ್ಲಪ್ಪಗೌಡರ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button