ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸವದತ್ತಿ ತಾಲ್ಲೂಕಿನ ಕಡಬಿ ಶಿವಾಪುರ ಬಳಿ ಕಾರು ನಾಲೆಗೆ ಬಿದ್ದು ಒಂದೇ ಕುಟುಂಬದ 5 ಜನ ನೀರು ಪಾಲಾಗಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದಿದೆ.
ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾನೆ.
ಪಕ್ಕೀರವ್ವ ಪೂಜೇರಿ(30), ಹನುಮಂತ ಪೂಜೇರಿ(59), ಲಗಮಣ್ಣ ಪೂಜೇರಿ(37), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(42) ಮೃತರಾದವರು.
ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ