Latest

ಪಿಡಬ್ಲ್ಯುಡಿ ಆಫೀಸ್ ಸುಪರಿಂಟೆಂಡೆಂಟ್ ಎಸಿಬಿ ಬಲೆಗೆ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಬಾಕಿ ಇರುವ ಬಿಲ್ ಗಳನ್ನು ಕ್ಲಿಯರ್ ಮಾಡಲು ಮತ್ತು ವರ್ಗಾವಣೆ ಆದೇಶ ನೀಡಲು ತಮ್ಮದೇ ಇಲಾಖೆಯ ಸಿಬ್ಬಂದಿಯಿಂದ 10 ಸಾವಿರ ರೂ. ಲಂಚ ಪಡೆಯುವಾಗ ಬೆಳಗಾವಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ  ಆಫೀಸ್ ಸುಪರಿಂಟೆಂಡೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾನಸೌಧ  ವಿಭಾಗದ ಪ್ರಥಮ ದರ್ಜೆ ಗುಮಾಸ್ತ ಶರಣಪ್ಪ ಈರಪ್ಪ ಮದಸನಾಳ ನೀಡಿದ ದೂರನ್ನು ಆಧರಿಸಿ ಎಸಿಬಿ ಅಧಿಕರಿಗಳು ದಾಳಿ ನಡೆಸಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು, ಆರೋಪಿ ರಮೇಶ ಶಂಕರ ದೇವಗೇಕರ್ ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಈ ಮೊದಲು ಇದೇ ಕೆಲಸಕ್ಕೆ 3 ಸಾವಿರ ರೂ. ಪಡೆದಿದ್ದ ಎಂದು ಎಸಿಬಿ ಎಸ್ ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button