Latest

ಪ್ರಾಣಿ ಕಳ್ಳ ಸಾಗಾಣಿಕೆ: ಇಬ್ಬರ ಬಂಧನ

   ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು
ತಾಲೂಕಿನ ಹೊನ್ನಾಪುರ  ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಿಡಿಮದ್ದು ಸಿಡಿಸಿ ಕಾಡು ಹಂದಿಯನ್ನು ಕೊಂದು ಸಾಗಿಸುತ್ತಿರುವ  ವ್ಯಕ್ತಿಗಳನ್ನು ಗೋಲಿಹಳ್ಳಿ
ವಲಯ ಅರಣ್ಯಾಧಿಕಾರಿ ರತ್ನಾಕರ ಓಬಣ್ಣವರ ಮಾರ್ಗದರ್ಶನದಲ್ಲಿ ಕಿತ್ತೂರ ಉಪವಲಯ ಅರಣ್ಯಾಧಿಕಾರಿ ಎಚ್ ಲೋಹಿತ್ ‌ಬಂಧಿಸಿದ್ದಾರೆ.
ಹೊನ್ನಾಪುರ ಗ್ರಾಮದ ನಾಗಪ್ಪ ಗಂಗಪ್ಪ ಅಂಗಡಿ ಹಾಗೂ ಕರೆಪ್ಪ ಮಹಾದೇವ ಮರಕುಂಬಿ ಆರೋಪಿಗಳು  ಜೀವಂತ ಆಮೆ ಹಾಗೂ ಸತ್ತ ಹಂದಿಯನ್ನು ಸಾಗಿಸುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ . 
ಅರಣ್ಯ ರಕ್ಷಕರಾದ ರಾಜು ಹುಬ್ಬಳ್ಳಿ, ಗಿರೀಶ ಮೆಕ್ಕೆದ ಹಾಗೂ ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button