Latest

ಬೆಳಗಾವಿಯಿಂದ ಸ್ಟಾರ್ ಏರ್ ಲೈನ್ಸ್ : ಫೆ.5ರಿಂದ ಆರಂಭ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಘೋಡಾವತ್ ಮಾಲಿಕತ್ವದ ಸ್ಟಾರ್ ಏರ್ ಲೈನ್ಸ್ ಫೆ.5ರಿಂದ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಲಿದೆ. ಈ ಸಂಬಂಧ ತನ್ನ ವೆಬ್ ಸೈಟ್  ನಲ್ಲಿ ಮಾಹಿತಿ ಹಾಕಿದ್ದು, ಬುಕ್ಕಿಂಗ್ ಆರಂಭಿಸಿದೆ. 

ಸ್ಟಾರ್ ಏರ್ ಲೈನ್ಸ್ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ತಿರುಪತಿಗೆ ವಿಮಾನ ಆರಂಭಿಸುವುದಾಗಿ ಈ ಹಿಂದೆ ಪ್ರಕಟಿಸಿತ್ತು. ಬೆಳಗಾವಿ ಪ್ರಸ್ತಾಪವಿರಲಿಲ್ಲ. ಆದರೆ ಇದೀಗ ಬೆಳಗಾವಿಯಿಂದ ಫೆ.5ರಿಂದ ವಿಮಾನ ಆರಂಭಿಸುವ ಪ್ರಕಟಣೆ ಹೊರಡಿಸಿದೆ. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 1.25 ಕ್ಕೆ ಬೆಂಗಳೂರಿನಿಂದ ಹೊರಟು 2.30ಕ್ಕೆ ಬೆಳಗಾವಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ ಹೊರಟು 4.05ಕ್ಕೆ ಬೆಂಗಳೂರು ತಲುಪಲಿದೆ.

ಮಂಗಳವಾರ ಮಾತ್ರ ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಟು 5.35ಕ್ಕೆ ಬೆಳಗಾವಿ ತಲುಪಲಿದ್ದು, ಸಂಜೆ 6 ಗಂಟೆಗೆ ಬೆಳಗಾವಿಯಿಂದ ಹೊರಟು 7.05ಕ್ಕೆ ಬೆಂಗಳೂರು ತಲುಪಲಿದೆ. 

ಈ ಮಧ್ಯೆ ಉಡಾನ್ 3ರ ವಿಮಾನ ಸಂಚಾರದ ಪ್ರಕಟಣೆ ಇನ್ನೂ ವಿಳಂಬವಾಗುತ್ತಿದೆ. ಜ.7ರಂದು ಪ್ರಕಟಣೆ ಹೊರಬೀಳುವ ನಿರೀಕ್ಷೆ ಇತ್ತು. ಆದರೆ ಈವರೆಗೂ ಪ್ರಕಟಿಸಲಾಗಿಲ್ಲ. ಇದೀಗ ಸೋಮವಾರ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. 

ಉಡಾನ್ 3ರಲ್ಲಿ ಬೆಳಗಾವಿ- ಮೈಸೂರು ಮಧ್ಯೆ ವಿಮಾನ ಸಂಚಾರ ಖಚಿತವಾಗಿದೆ. ಈ ಸಂಬಂಧ ಈಗಾಗಲೆ ಮೈಸೂರು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಸುಮಾರು 14 ಸ್ಥಳಗಳಿಗೆ ಬೆಳಗಾವಿಯಿಂದ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button