Latest

ಭೂತರಾಮನಹಟ್ಟಿಯ ಮುಕ್ತಿ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಜನವರಿ 18 ರವರೆಗೆ ನಡೆಯುವ ಭೂತರಾಮನಹಟ್ಟಿಯ ಮುಕ್ತಿ ಮಠದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. 

ಮುಕ್ತಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಜಾತ್ರೆಗೆ ಚಾಲನೆ ನೀಡಿದರು. ಇದೇ ವೇಳೆ ಹಿರೇಮುನವಳ್ಳಿಯ ಶಂಬುಲಿಂಗ ಶಿವಾಚಾರ್ಯ ಸ್ವಾಮಿಗಳು ಧ್ವಜಾರೋಹಣವನ್ನು ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಶಿವ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮುಕ್ತಿಮಠ ಕ್ಷೇತ್ರದ ಕಾಯಕಲ್ಪ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ  ಮಾಡಿದ್ದಾರೆ.  ರಾಜ್ಯ, ಹೊರ ರಾಜ್ಯಗಳಿಂದ ಭಕ್ತ ಸಮೂಹ ಈ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿಯ ಮುಕ್ತಂಬ ದೇವಿಯ ದರ್ಶನ ಮಾಡುತ್ತಿದ್ದಾರೆ. ಪಂಚಪೀಠಾಧೀಶ್ವರರ ವಿಶೇಷವಾಗಿರುವ ಮೂರ್ತಿಗಳು, ದ್ವಾದಶ ಜ್ಯೋತಿರ್ಲಿಂಗಗಳು, ಹಾಗೆ ಅನೇಕ ದೇವಾನುದೇವತೆಗಳು ಕ್ಷೇತ್ರದಲ್ಲಿ ನಿಂತಿರುವುದರಿಂದ ಇದು ಭೂಕೈಲಾಸ ವಾಗಿ ಹೊರಹೊಮ್ಮುತ್ತಿರುವುದು  ಅಭಿಮಾನದ ಸಂಗತಿ ಎಂದು  ಹೇಳಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಸೋಮೇಶ್ವರ ಸ್ವಾಮಿಗಳು, ಭಕ್ತರ ಸಹಕಾರದಿಂದ ಕ್ಷೇತ್ರ ಬೆಳೆಯುತ್ತಿದೆ ಎಂದರು.

ಹಿರೆಮುನವಳ್ಳಿಯ ಶಂಬುಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪಂಚಾಚಾರ್ಯರ ಧ್ವಜಾರೋಹಣ ಮಾಡುವುದರ ಮೂಲಕ ಪಂಚತತ್ತ್ವದ ಪೂಜೆಯನ್ನು ನೆರವೇರಿಸಲಾಯಿತು ಎಂದರು.

ಚಂದ್ರಶೇಖರ ಶಾಸ್ತ್ರಿಗಳು ಪೌರೋಹಿತ್ಯ ನೆರವೇರಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button