ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡಕರಿ ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಕುಸಿದು ಕುಳಿತರು.
ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ವೇದಿಕೆಯಲ್ಲಿ ಕುಳಿತಿದ್ದ ಗಡಕರಿ ಬಾಯಿಯಲ್ಲಿ ಏನನ್ನೋ ಇಟ್ಟುಕೊಂಡು ಜಗಿಯುತ್ತಿದ್ದರು. ಈ ವೇಳೆ ಅವರ ಮುಖಭಾವದಲ್ಲಿ ಬದಲಾವಣೆ ಕಾಣಿಸಿತು. ಕ್ಷಣ ಮಾತ್ರದಲ್ಲಿ ಅಲ್ಲಿಯೇ ಕುಸಿದು ಕುಳಿತರು. ತಕ್ಷಣ ಭದ್ರತಾ ಸಿಬ್ಬಂದಿ ಮತ್ತು ಅಕ್ಕಪಕ್ಕದಲ್ಲಿದ್ದವರು ಅವರನ್ನು ಎತ್ತಿ ನೀರು ಕುಡಿಸಿದರು. ಕೂಡಲೆ ಅವರು ಸಾವರಿಸಿಕೊಂಡರಾದರೂ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಡಿಮೆ ರಕ್ತದೊತ್ತಡದಿಂದ ಈ ರೀತಿಯಾಗಿರಬಹುದೆಂದು ಶಂಕಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ