ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 14ನೇ ಮಾಸಿಕ ಸುವಿಚಾರ ಕಾರ್ಯಕ್ರಮ ನಡೆಯಿತು. ಉಪನ್ಯಾಸಕಿ ಗುರುದೇವಿ ಹುಲೆಪ್ಪನವರ್ ಮಠ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶಿವಶರಣೆಯರ ವಚನದಲ್ಲಿ ವೈಚಾರಿಕತೆ ಇದ್ದು, ಅವರು ನ್ಯಾಯಯುತವಾಗಿ ಬದುಕುತ್ತಿದ್ದರು. ಅಲ್ಲದೆ ತಮ್ಮ ಗಂಡಂದಿರಿಗೂ ನ್ಯಾಯುತವಾಗಿ ಬದುಕಲು ಮಾರ್ಗದರ್ಶನ ಮಾಡುತ್ತಿದ್ದರು. ಶಿವಚರಣೆಯರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹುಕ್ಕೇರಿಯ ಹಿರೇಮಠದಲ್ಲಿ 500 ಮಹಿಳೆಯರಿಗೆ ವೇದ ಕಲಿಸುವುದರ ಮೂಲಕ ಮಹಿಳಾ ಸಮಾನತೆಗೆ ಅವಕಾಶ ನೀಡಲಾಗಿದೆ ಎಂದು ಪ್ರಶಂಸಿಸಿದರು.
ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ನೀಲಜಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಾನಿಧ್ಯ ವಹಿಸಿದ್ದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾತ್ವಿಕತೆಯ ಬದುಕನ್ನು ರೂಢಿಸಿಕೊಂಡು ನಡೆದಾಗ ಮಾತ್ರ ಬದುಕಿನಲ್ಲಿ ಶಾಂತಿ ಸಾಧ್ಯ ಎಂದರು.
ಶಾಂತಾದೇವಿ ಹುಲೆಪ್ಪನವರಮಠ, ಶಾಂತಾದೇವಿ ಹಿರೇಮಠ ವೇದಿಕೆಯ ಮೇಲಿದ್ದರು. ಪೃಥ್ವಿ ಹಿರೇಮಠ ಪ್ರಾರ್ಥನೆ ಹಾಡಿದರು. ಸಂಪತಕುಮಾರ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಸವಡಿ ಸಾಲಿಮಠ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ