Latest

ಸೇವ್ ವಿಟಿಯು:ನಾಳೆ ಬೃಹತ್ ಪ್ರತಿಭಟನಾ ಸಭೆ; ಪ್ರಗತಿವಾಹಿನಿ ಇಂಪ್ಯಾಕ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪ್ರಗತಿವಾಹಿನಿ ಆರಂಭಿಸಿರುವ ಸೇವ್ ವಿಟಿಯು ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸೋಮವಾರ ಎರಡು ಬೃಹತ್ ಸಭೆಗಳು ಆಯೋಜನೆಯಾಗಿವೆ.

Home add -Advt

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

ಬೆಳಗಾವಿಯ ಉದ್ಯಮಿಗಳು ಹಾಗೂ 25ಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಸಂಜೆ 4 ಗಂಟೆಗೆ ನಗರದ ಫೌಂಡ್ರಿ ಕ್ಲಸ್ಟರ್ ನಲ್ಲಿ ಸಭೆ ಸೇರಿ ವಿಟಿಯು ಉಳಿಸಲು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಬಿಲ್ಡರ್ ಅಸೋಸಿಯೇಶನ್,  ಪ್ರೊಫೇಶನಲ್ ಫೋರಂ, ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್, ಫೌಂಡ್ರಿಕ್ಲಸ್ಟರ್ ಸಂಘಟನೆ, ಸಣ್ಣ ಕೈಗಾರಿಕೆಗಳ ಸಂಘ, ಚೆಂಬರ್ ಆಫ್ ಕಾಮರ್ಸ್, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇದೇ ವೇಳೆ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಬೆಂಗಳೂರಿನಲ್ಲಿ ಈ ಭಾಗದ ಎಲ್ಲ ಶಾಸಕರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಎಲ್ಲ ಜನಪ್ರತಿನಿಧಿಗಳು ಸೇರಿ ವಿಟಿಯು ಉಳಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕುರಿತು ನಿರ್ಧರಿಸಲಾಗುವುದು. ಯಾವುದೇ ಕಾರಣದಿಂದ ವಿಟಿಯು ವಿಭಜಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

 ಹಲವಾರು ಸಂಘಟನೆಗಳ ಪ್ರಮುಖರು, ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರು ಪ್ರಗತಿವಾಹಿನಿಗೆ ಕರೆ ಮಾಡಿ ವಿಟಿಯು ಉಳಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ರೀತಿಯ ಹೋರಾಟಕ್ಕೂ ಸಿದ್ದವಿರುವುದಾಗಿ ಅವರು ತಿಳಿಸಿದ್ದಾರೆ. 

ವಿಟಿಯು ವಿಭಜನೆಗೆ ಪ್ರಭಾವಿಗಳ ಕೈವಾಡ!; ಡಿಸೆಂಬರ್ ನಲ್ಲೇ ಪ್ರಕ್ರಿಯೆ ಆರಂಭವಾಗಿತ್ತು!

ವಿಟಿಯು ವಿಭಜನೆ ವಿರೋಧಿಸಿ ಹೋರಾಟಕ್ಕೆ ಸ್ವಾಭಿಮಾನಿ ಬೆಳಗಾವಿಗರು ಸಜ್ಜು

ಬೆಳಗಾವಿಯಲ್ಲಿ ವಿಟಿಯು ಉಳಿಸಿ ಹೋರಾಟ ಆರಂಭ

ಸರಕಾರವೇ ರಾಜ್ಯ ಒಡೆಯಲು ಹೊರಟಂತಿದೆ -ಕೋರೆ ಆಕ್ರೋಶ

ನಾಳೆಯೇ ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ -ಅಂಗಡಿ

Related Articles

Back to top button