ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಯೋಧ ಸತೀಶ ಕೃಷ್ಣ ಗುರವ (30) ಒರಿಸ್ಸಾ ರಾಜ್ಯದ ಗೋಪಾಲಪುರ ಆರ್ಮಿ ಡಿಫೆನ್ಸ್ ಅಕಾಡೆಮಿಯಲ್ಲಿ ಆಟ ಆಡುವಾಗ ತಲೆ ಸುತ್ತಿ ಬಿದ್ದು ಸಾವನ್ನಪ್ಪಿದ್ದಾರೆ.
ಬಿದ್ದ ತಕ್ಷಣ ವಿಶಾಖಪಟ್ಟಣ ಮಿಲ್ಟ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
10 ವರ್ಷದ ಹಿಂದೆ ಸೇನೆಗೆ ಸೇರಿದ್ದ ಸತೀಶ್, ಅಂಬಾಲಾ, ಹರಿಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು. 3 ವರ್ಷಗಳ ಹಿಂದೆ ಜಟಗಾ ಗ್ರಾಮದ ರೂಪಾಲಿ ಎಂಬುವರ ಜೊತೆಗೆ ಮದುವೆಯಾಗಿತ್ತು. ಪ್ರೇಮಾನಂದ್ ಮತ್ತು ಸಾಗರ್ ಎನ್ನುವ ಇಬ್ಬರು ಅಣ್ಣಂದಿರು ಇದ್ದಾರೆ.
ಯೋಧನ ಪಾರ್ಥಿವ ಶರೀರ ವಿಶಾಖಪಟ್ಟಣದಿಂದ ವಿಮಾನ ಮೂಲಕ ಗೋವಾಕ್ಕೆ ಸೋಮವಾರ ಮುಂಜಾನೆ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ