Latest

ಕುಂದಗೋಳ ಕ್ಷೇತ್ರದಲ್ಲಿ ಕೋರೆ, ಕವಟಗಿಮಠ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಕುಂದಗೋಳ

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

Home add -Advt

ಕುಂದಗೋಳ ತಾಲೂಕಿನ ಅದರಗುಂಚಿ, ಸುಂಶಿ ಮೊದಲಾದ ಗ್ರಾಮದಲ್ಲಿ ಬಿಜೆಪಿಯ ಪರವಾಗಿ ಪ್ರಚಾರ  ನಡೆಸಿದರು.

ರಾಜ್ಯ ಸರಕಾರ ಉತ್ತರ ಕರ್ನಾಟಕದ ಬಗ್ಗೆ ಸಂಪೂರ್ಣ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇಲ್ಲಿಯ ಯಾವುದೇ ಸಮಸ್ಯೆಯ ಕಡೆಗೆ ಗಮನ ಹರಿಸುತ್ತಿಲ್ಲ. ಈ ಭಾಗದ ಜನರು ಪ್ರಸ್ತುತ ಸಮ್ಮಿಶ್ರ ಸರಕಾರದ ಬಗ್ಗೆ ಸಂಪೂರ್ಣ ರೋಸಿ ಹೋಗಿದ್ದಾರೆ ಎಂದು ಕೋರೆ ಆರೋಪಿಸಿದರು.

ವಿಧಾನಪರಿಷತ್ ಸದಸ್ಯರಾದ ಹನಮಂತ್ ನಿರಾಣಿ, ಎಸ್ ಬಿ ಸಂಕನೂರ್, ಮುಖಂಡರಾದ ಶಂಕರಣ್ಣ ಮುನವಳ್ಳಿ , ರಾಜು ಮರಬದ್, ಬಸವರಾಜ್ ಸಾಲಿಮಠ ಮುಂತಾದವರು ಸಹ ಇವರೊಂದಿಗೆ ಪ್ರಚಾರ ಕಾರ್ಯದಲ್ಲಿದ್ದಾರೆ.

Related Articles

Back to top button