Latest

ಸೋಮವಾರ ಸಿಎಂ ಅಧಿವೇಶನಕ್ಕೆ ಬರಲ್ಲ

*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗಾವಿಗೆ ಬರುವುದಿಲ್ಲ. ವಿಧಾನಮಂಡಳದ ಅಧಿವೇಶನಕ್ಕೆ ಅವರು ಗೈರಾಗಲಿದ್ದಾರೆ.

ಮುಖ್ಯಮಂತ್ರಿಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ವಿಮಾನದಲ್ಲಿ ತೆರಳಲಿರುವ ಅವರು 10.30ಕ್ಕೆ ರಾಜಸ್ಥಾನ ಹಾಗೂ 1.30ಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಹಿಂದಿರುಲಿದ್ದಾರೆ.

ಸೋಮವಾರ ನಿಗದಿದಾಗಿದ್ದ ಕೆಎಟಿ ಉದ್ಘಾಟನೆ ಸೇರಿದಂತೆ ಮುಖ್ಯಮಂತ್ರಿಗಳ ಇನ್ನಿತರ ಕಾರ್ಯಕ್ರಮಗಳೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

Related Articles

Back to top button