Kannada NewsKarnataka NewsLatest

*ಯುವಕನ ಕಿರುಕುಳ; ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಯುವಕನ ಕಿರುಕುಳಕ್ಕೆ ಮನನೊಂದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ನಡೆದಿದೆ.

14 ವರ್ಷದ ಬಾಲಕಿ ವರ್ಷಿಣಿ ನೇಣಿಗೆ ಶರಣಾದವಳು. ತ್ಯಾಗರಾಜ್ ಎಂಬ ಯುವಕ ಬಾಲಕಿಯ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತಿದ್ದ. ಯುವಕನ ಕಿರುಕುಳದ ಬಗ್ಗೆ ಬಾಲಕಿ ಮನೆಯಲ್ಲಿಯೂ ಹೇಳಿದ್ದಳು. ಎರಡು ತಿಂಗಳ ಹಿಂದೆ ಬಾಲಕಿ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದರು.

Home add -Advt

ಕೆಲ ದಿನ ಸುಮ್ಮನಿದ್ದ ಯುವಕ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾನೆ. ಯುವಕನ ಕಾಟಕ್ಕೆ ಬೇಸತ್ತ ಬಾಲಕಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button