Karnataka News

*ಹಿಂದು- ಮುಸ್ಲಿಂ ಪ್ರೇಮ ಪ್ರಕರಣ: 18 ವಿದ್ಯಾರ್ಥಿಗಳ ಅಮಾನತ್ತು*

ಪ್ರಗತಿ ವಾಹಿನಿ ಸುದ್ದಿ, ಮಂಗಳೂರು: ದಕ್ಷಿಣ ಕನ್ನಡದ ವಿಟ್ಲದ ಪದವಿ ಪೂರ್ವ ಕಾಲೇಜೊಂದರಲ್ಲಿ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ನಡುವಿನ ಪ್ರೇಮ ಪ್ರಕರಣದಲ್ಲಿ 18 ವಿದ್ಯಾರ್ಥಿಗಳನ್ನು ಕಾಲೇಜ್ ಆಡಳಿತ ಮಂಡಳಿ ಅಮಾನತ್ ಮಾಡಿದೆ.

ಖಾಸಗಿ ಪದವಿ ಪೂರ್ವ ಕಾಲೇಜಿನ ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಂ ವಿದ್ಯಾರ್ಥಿ ನಡುವೆ ಪ್ರೇಮ ಪ್ರಕರಣ ನಡೆದಿದ್ದು, ಈ ವಿಚಾರವನ್ನು ಇಬ್ಬರೂ ವಿದ್ಯಾರ್ಥಿಗಳ ಪೋಷಕರ ಗಮನಕ್ಕೂ ಕಾಲೇಜು ಆಡಳಿತ ಮಂಡಳಿ ತಂದಿತ್ತು.

Home add -Advt

 

ಆದರೆ ಇತ್ತೀಚೆಗೆ ಕಾಲೇಜ್ ವಾರ್ಷಿಕೋತ್ಸವದಲ್ಲಿ ಈ ಪ್ರಕರಣ ಮತ್ತೆ ಸುದ್ದಿಯಾಗಿದೆ.

ಈ ನಡುವೆ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳ ಮೊಬೈಲ್ ಚೆಕ್ ಮಾಡುವಾಗ ವಿದ್ಯಾರ್ಥಿನಿಯ ಬಳಿ ಪ್ರೇಮ ಪತ್ರ ಪತ್ತೆಯಾಗಿತ್ತು ಎನ್ನಲಾಗಿದೆ.

 

ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮ ಅನುಸರಿಸಿದ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ತಿಳಿಸಿ ಮನೆಗೆ ಕಳುಹಿಸಿದ್ದಾರೆ.

ಇನ್ನು, ಮುಸ್ಲಿಂ ವಿದ್ಯಾರ್ಥಿಯನ್ನು ಈ ಬಗ್ಗೆ ಪ್ರಶ್ನಿಸಲು ಮುಂದಾಗಿದ್ದ ಹಿಂದೂ ವಿದ್ಯಾರ್ಥಿಗಳು, ಮುಸ್ಲಿಂ ಯುವಕನಿಗೆ ಸಹಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳನ್ನು ಸಹ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ತಿಳಿಸಿ ಮನೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

 

ಬಿಜೆಪಿ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದು, ರಾಜ್ಯದ ಜನ ಬೇಸತ್ತಿದ್ದಾರೆ ಎಂದು ಮಧು ಬಂಗಾರಪ್ಪ ವಾಗ್ದಾಳಿ

 

 

Related Articles

Back to top button