Latest

ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಕಾರು ಅಪಘಾತ

ಪ್ರಗತಿವಾಹಿನಿ, ಕೀವ್:  ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರ ಕಾರು ರಾಜಧಾನಿ ಕೀವ್ ನಗರ ಹೊರವಲಯದಲ್ಲಿ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ವೇಗವಾಗಿ ಎದುರಿನಿಂದ ಬಂದ ಕಾರು ಅಧ್ಯಕ್ಷರ ಕಾರಿಗೆ ಡಿಕ್ಕಿಯಾಗಿದೆ. ಆದರೆ ಅಧ್ಯಕ್ಷ ಜೆಲೆನ್ಸ್ಕಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಯಾವುದೇ ಗಂಭೀರ ತೊಂದರೆ ಆಗಿಲ್ಲ ಎಂದು ಅಧ್ಯಕ್ಷ ಜೆಲೆನ್ಸ್ಕಿ ಅವರ ವಕ್ತಾರ ತಿಳಿಸಿರುವುದಾಗಿ ಉಕ್ರೇನ್ ನ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.

Home add -Advt

ಅಧ್ಯಕ್ಷ ಜೆಲೆನ್ಸ್ಕಿ ಅವರ ಕಾರು ಚಾಲಕನಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದು, ಸ್ವತಃ ಅಧ್ಯಕ್ಷರು ಚಾಲಕನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ.

ರಾಜಾಹುಲಿ ಇರಲಿ ಯಾರೇ ಇರಲಿ ಮೊದಲು ರಾಜೀನಾಮೆ ಕೊಡಲಿ; ಸ್ವಪಕ್ಷದ ಶಾಸಕನಿಂದಲೇ ಬಿಎಸ್ ವೈಗೆ ಆಗ್ರಹ

https://pragati.taskdun.com/politics/basanagouda-patil-yatnalb-s-yedyurapparesign/

Related Articles

Back to top button