
ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ಕಾಂತಾರ ಸಿನೇಮಾ ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತೆಲುಗು, ತಮೀಳಿನಲ್ಲೂ ಅಬ್ಬರಿಸುತ್ತ ಮುನ್ನಡೆದಿದೆ. ಇದರ ನಡುವೆ ಕನ್ನಡಿಗರು ಹೆಮ್ಮೆ ಪಡುವಂತ ಸುದ್ದಿಯೊಂದು ಬಂದಿದೆ.
ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ ತಂದೆ, ಚಲನ ಚಿತ್ರ ನಿರ್ಮಾಪಕ ಅಲ್ಲು ಅರವಿಂದ ಅವರು ರಿಷಬ್ ಶೆಟ್ಟಿ ಅವರಿಗೆ ತೆಲುಗಿನ ಚಿತ್ರವೊಂದನ್ನು ನಿರ್ದೇಶನ ಮಾಡುವಂತೆ ಆಫರ್ ನೀಡಿದ್ದಾರೆ.
” ನಾನು ನಮ್ಮ ಗೀತಾ ಆರ್ಟ್ಸ್ ಗೆ ಚಿತ್ರವೊಂದನ್ನು ನಿರ್ದೇಶಿಸುವಂತೆ ರಿಷಬ್ ಅವರನ್ನು ಕೇಳಿದಾಗ ಅವರು ಈ ಆಫರ್ ಒಪ್ಪಿಕೊಂಡಿದ್ದಾರೆ ” ಎಂದು ಅಲ್ಲು ಅರವಿಂದ್ ಹೈದರಾಬಾದ್ ನಲ್ಲಿ ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಅಂದಹಾಗೆ ಕಾಂತಾರದ ಎಲ್ಲ ಭಾಷೆಗಳ ಈವರೆಗಿನ ಕಲೆಕ್ಷನ್ 175 ಕೋಟಿ ದಾಟಿದ್ದು, ಚಿತ್ರ 200 ಕೋಟಿ ಕ್ಲಬ್ ಸೇರುವತ್ತ ಧಾಪುಗಾಲಿಟ್ಟಿದೆ.
ಶಾಲೆಗಳಿಗೆ ಸುತ್ತೋಲೆ ವಿಚಾರ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ
https://pragati.taskdun.com/latest/100rs-per-monthparentsgovt-schooleducation-department-circulerb-c-nagesh-reaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ