Latest

ಮೂರು ದಿನಗಳಿಂದ ತಹಸೀಲ್ದಾರ್ ನಾಪತ್ತೆ; ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಹಾವೇರಿ: ಇಲ್ಲಿನ ತಹಸೀಲ್ದಾರ್ ಗಿರೀಶ ಸ್ವಾದಿ ಅವರು ಮೂರು ದಿನಗಳಿಂದ ನಾಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಮ್ಮ ಪತ್ನಿ ಭಾಗ್ಯ ಅವರಿಗೆ ಅಕ್ಟೋಬರ್ 31ರಂದು ರಾತ್ರಿ 9.30ಕ್ಕೆ ತಮ್ಮ ಪತ್ನಿ ಭಾಗ್ಯಶ್ರೀ ಅವರಿಗೆ ಕೊನೆಯ ಕರೆ ಮಾಡಿದ ಗಿರೀಶ, ಮರುದಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಇರುವುದರಿಂದ ರಾತ್ರಿ ಮನೆಗೆ ಬರಲಾಗುವುದಿಲ್ಲ, ಹಾವೇರಿ ಪ್ರವಾಸಿ ಮಂದಿರ ಅಥವಾ ಹಾನಗಲ್ ನ ಖಾಸಗಿ ಹೋಟೆಲ್ ನಲ್ಲಿ ತಂಗುವುದಾಗಿ ಹೇಳಿದ ನಂತರ ಗಿರೀಶ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊಂದಲ ಸೃಷ್ಟಿಸಿದೆ.

Home add -Advt

ತಹಸೀಲ್ದಾರ್ ಅವರ ಸರಕಾರಿ ವಾಹನದ ಚಾಲಕ ನ.1ರಂದು ಬೆಳಗ್ಗೆ ಅವರನ್ನು ಕರೆದೊಯ್ಯಲು ಮನೆಗೆ ಬಂದಾಗ ಅವರು ರಾತ್ರಿ ಮನೆಗೆ ಬಂದಿಲ್ಲ ಎಂಬುದಾಗಿ ಭಾಗ್ಯಶ್ರೀ ತಿಳಿಸಿದರೆನ್ನಲಾಗಿದೆ. ಇತ್ತ ವಿಚಲಿತರಾದ ಕುಟುಂಬದವರು ವಿಚಾರಿಸಿದಾಗ ಖಾಸಗಿ ಹೋಟೆಲ್ ನ 112ನೇ ಸಂಖ್ಯೆಯ ಕೊಠಡಿಯಲ್ಲಿ ರಾತ್ರಿ ತಂಗಿದ್ದ ಅವರು, ನ.1ರ ಬೆಳಗಿನಜಾವ 5 ಗಂಟೆಗೆ ಕೊಠಡಿ ಖಾಲಿ ಮಾಡಿ ಹೋಗಿದ್ದಾಗಿ ಮಾಹಿತಿ ಲಭಿಸಿದೆ.

ಇನ್ನೊಂದೆಡೆ ತಹಸೀಲ್ದಾರ್ ಗಿರೀಶ ಅವರು ತಮಗೆ ಅನಾರೋಗ್ಯ ಇರುವುದಾಗಿ ಕಾರಣ ಹೇಳಿ 3 ತಿಂಗಳ ರಜೆಗೆ ಅರ್ಜಿ ಹಾಕಿದ್ದು ಬ್ಯಾಡಗಿ ತಹಸೀಲ್ದಾರ್ ಗೆ ಅವರ ಪ್ರಭಾರ ವಹಿಸಿಕೊಟ್ಟಿರುವುದಾಗಿ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ. ಈ ಮಧ್ಯೆ ಅವರು ಮೊಬೈಲ್ ಸಂಪರ್ಕಕ್ಕೂ ಬಾರದೆ ಇರುವುದರಿಂದ ಹಲವು ಸಂದೇಹಗಳು ಹುಟ್ಟಿಕೊಂಡಿದ್ದು ಅವರ ಪತ್ನಿಯ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೃದಯಾಘಾತಕ್ಕೊಳಗಾಗಿ ಎರಡನೇ ತರಗತಿ ವಿದ್ಯಾರ್ಥಿ ಸಾವು

Related Articles

Back to top button