Latest

*ಶಾಲಾ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯ ಮೇಲೆ ಹರಿದ ಬಸ್; ಸ್ಥಳದಲ್ಲೇ ಬಾಲಕಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ರಾಮನಗರ: ಶಾಲಾ ಬಸ್ ಚಕ್ರದಡಿ ಸಿಲುಕಿ ಯುಕೆಜಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಪಿಚ್ಚನಕೆರೆ ಬಳಿ ನಡೆದಿದೆ.

6 ವರ್ಷದ ರಕ್ಷಿತಾ ಮೃತ ವಿದ್ಯಾರ್ಥಿನಿ. ಚಾಲಕ ಹಾಗೂ ಬಸ್ ಸಿಬ್ಬಂದಿ ನಿರ್ಲಕ್ಷದಿಂದ ಶಾಲಾ ಬಸ್ ನಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು, ವಿದ್ಯಾರ್ಥಿನಿಯ ಮೇಲೆಯೇ ಬಸ್ ಚಕ್ರ ಹರಿದಿದೆ. ವಿದ್ಯಾರ್ಥಿನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

Home add -Advt

ರಕ್ಷಿತಾ ಸ್ರೀಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಯುಕೆಜಿ ಓದುತ್ತಿದ್ದಳು. ಬಸ್ ಬಾಗಿಲ ಬಳಿಯ ಸೀಟ್ ನಲ್ಲಿ ಕುಳಿತಿದ್ದ ರಕ್ಷಿತಾ, ಇತರ ವಿದ್ಯಾರ್ಥಿಗಳನ್ನು ಬಸ್ ನಿಂದ ಇಳಿಸಿ ಬಸ್ ಮುಂದೆ ಸಾಗುವಾಗ ಶಾಲಾ ಸಿಬ್ಬಂದಿ ಬಸ್ ಬಾಗಿಲು ಹಾಕಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕುವ ವೇಳೆ ರಕ್ಷಿತಾ ಕೆಳೆಗೆ ಬಿದ್ದಿದ್ದಾಳೆ. ಬಿದ್ದ ವೇಳೆ ಬಸ್ ಹಿಂದಿನ ಚಕ್ರ ಆಕೆಯ ಮೇಲೆಯೇ ಹರಿದಿದೆ. ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಬಸ್ ಚಾಲಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

*ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಕೇಸ್; ಆರೋಪಿ ಅರೆಸ್ಟ್*

https://pragati.taskdun.com/bajarangadala-activistmurder-attemptaccused-arrestedsagara/

Related Articles

Back to top button