ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪತ್ನಿ ಕಾಟಕ್ಕೆ ಬೇಸತ್ತ ಗುತ್ತಿಗೆದಾರನೊಬ್ಬ 26 ಲಕ್ಷ ಹಣದೊಂದಿಗೆ ಗೋವಾಕ್ಕೆ ತೆರಳುತ್ತಿದ್ದಾಗ ಬೆಳಗಾವಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಳಗಾವಿ ಕರ್ನಾಟಕ ಚೌಕ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಕಾರನ್ನು ತಡೆದ ಪೊಲೀಸರು 26 ಲಕ್ಷ ರೂಪಾಯಿ ದಾಖಲೆ ಇಲ್ಲದ ಹಣ ಜಪ್ತಿ ಮಾಡಿದ್ದಾರೆ. ಗೋವಾಕ್ಕೆ ಕಾರಿನಲ್ಲಿ ಹಣದ ಸಮೇತ ಹೊರಟಿದ್ದ ಗುತ್ತಿಗೆದಾರನನ್ನು ವಶಕ್ಕೆ ಪಡೆದಿದ್ದಾರೆ.
ಗುತ್ತಿಗೆದಾರ ತಾನು ಒಯ್ಯುತ್ತಿದ್ದ ಹಣಕ್ಕೆ ದಾಖಲೆಗಳು ಇವೆ. ತಾನು ಮುಂಬೈನಲ್ಲಿ ಪ್ರಥಮದರ್ಜೆ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಇಷ್ಟು ದೊಡ್ಡ ಮೊತ್ತದ ಹಣ ಒಯ್ಯುತ್ತಿರುವ ಬಗ್ಗೆ ಪೊಲಿಸರು ವಿಚಾರಿಸಿದಾಗ, ಪತ್ನಿ ಕಾಟ ತಾಳಲಾರದೇ ನೆಮ್ಮದಿಗಾಗಿ ಗೋವಾಕ್ಕೆ ಹೋಗುತ್ತಿದ್ದೇನೆ ಎಂದಿದ್ದಾನೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ