Belagavi NewsBelgaum NewsKannada News
ಸ್ವಾಮಿ ವಿವೇಕಾನಂದ ಶಾಲೆಗೆ ಪ್ರಯತ್ನ ಸಂಘಟನೆ ದೇಣಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಪ್ರಯತ್ನ ಸಂಘಟನೆಯ ವತಿಯಿಂದ ಖಾನಾಪುರದ ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಗೆ 6 ಫ್ಯಾನ್ ಗಳನ್ನು ದೇಣಿಗೆಯಾಗಿ ನೀಡಲಾಗಿದೆ.
ಶಾಲೆಯ ನೂತನ ಕಟ್ಟಡಕ್ಕಾಗಿ ರೂ. 30 ಸಾವಿರ ರೂ. ಮೌಲ್ಯದ 6 ದೊಡ್ಡ ಗೋಡೆ ಫ್ಯಾನ್ ಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಚೇತನ್ ಮನ್ಹೇರಿಕರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದು, ಶಾಲೆಯ ಬಗ್ಗೆ ಮಾಹಿತಿ ನೀಡಿದರು. ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ವೆಂಕಟೇಶ್ ಸರ್ನೋಬತ, ಗೌರಿ ಸರ್ನೋಬತ್, ಬೀನಾ, ಪದ್ಮಾ ವೆರ್ಣೇಕರ್, ಸುಮಾ ಹೊಂಡದ, ಸುನೀತಾ ಭಟ್, ಶುಭಾ, ರೂಪಾ ಮೊದಲಾದವರು ಉಪಸ್ಥಿತರಿದ್ದರು.



