Belagavi NewsBelgaum NewsKannada NewsKarnataka News

*ಪ್ರವಾಹ ಉಂಟಾಗಿ ತೆಲಾಡಿದ ರಸ್ತೆ ಬದಿ ನಿಲ್ಲಿಸಿದ ವಾಹನಗಳು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹದ ಪ್ರರಿಸ್ಥಿತಿ ಉಂಟಾಗಿದೆ. 

Home add -Advt

ಶನಿವಾರ ಸಂಜೆ 5 ಗಂಟೆಯಿಂದ ಸತತವಾಗಿ 3 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಕೇಶ್ವರದ ಪಟ್ಟಣದಲ್ಲಿನ ರಸ್ತೆಗಳು ಅಕ್ಷರಶಃ ಹಳ್ಳದಂತೆ ಕಂಡು ಬಂದವು.  ಲಕ್ಷ್ಮೀ ಹಳ್ಳಕ್ಕೆ ಪ್ರವಾಹ ಉಂಟಾಗಿ ಹಳ್ಳದ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ನೀರಲ್ಲಿ ತೇಲಾಡಿದ ಘಟನೆ ನಡೆದಿದೆ.

ಪಟ್ಟಣದಲ್ಲಿ ಹರಿದು ಹೋಗುವ ಲಕ್ಷ್ಮೀ ಹಳ್ಳದಲ್ಲಿ ಮಳೆ ನೀರಿನಿಂದ ಪ್ರವಾಹ ಉಂಟಾಗಿ ಹಳ್ಳದ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರು ಹಾಗೂ ಒಂದು ಪಿಕ್ ಬೂಲೇರೋ ಗೂಡ್ಸ್ ವಾಹನಗಳು ನೀರಿನಲ್ಲಿ ತೇಲಾಡಿವೆ. ಅದೇ ರೀತಿ ಮಳೆ ರಭಸಕ್ಕೆ ಪಟ್ಟಣದ ಕೆಲವು ಮನೆಗಳಿಗೆ ನೀರು ನುಗ್ಗಿದೆ.‌

Related Articles

Back to top button