Film & EntertainmentKannada NewsKarnataka NewsNational

*ಹಳೆ ಪ್ರಕರಣದಲ್ಲಿ ದರ್ಶನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಮುಂದಾದ ಅರಣ್ಯ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರೋ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ಬಾತುಕೋಳಿ ಸಾಕಿರುವ ಆರೋಪದಡಿ ದರ್ಶನ್ ವಿರುದ್ಧ ಅರಣ್ಯ ಇಲಾಖೆ ಹಳೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದೆ.

Home add -Advt

ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್​ಗೆ ಸಂಬಂಧಿಸಿದ್ದಂತೆ ದೂರು ದಾಖಲಾಗಿ ಐದು ಬಾರಿ ನೋಟಿಸ್ ಕೊಟ್ಟರು ಕೂಡ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. 

ಹೀಗಾಗಿ ಈ ಕೇಸ್​ ಗೆ ಸಂಬಂಧಿಸಿದಂತೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ A1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ನಟ ದರ್ಶನ್ A3 ಆರೋಪಿ ಮಾಡಲಾಗಿದೆ. 

ಈಗಾಗಲೇ 5 ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ 2 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

Related Articles

Back to top button