ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಯೊಬ್ಬ ತನ್ನ ಒಂದು ವರ್ಷದ ಮಗುವಿಗೆ ಖೈದಿಯಂತೆ ಬಟ್ಟೆ ಹಾಕಿ, ಖೈದಿ ನಂಬರ್ ಬರೆದು ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಹುಚ್ಚಾಟ ಮೆರೆದಿದ್ದರು. ಇದೀಗ ಮಗುವಿನ ಪೋಷಕರಿಗೆ ಸಂಕಷ್ಟ ಎದುರಾಗಿದೆ.
ಒಂದು ವರ್ಷದ ಕಂದಮ್ಮನನ್ನು ಖೈದಿಯಂತೆ ಬಟ್ಟೆ ತೊಡಿಸಿ, ಖೈದಿ ನಂಬರ್ ಹಾಕಿ, ಪಕ್ಕದಲ್ಲೇ ಕೈ ಕೋಳ ಮಾದರಿ ಇಟ್ಟು, ಜೈ ಡಿ ಬಾಸ್ ಎಂದು ಬರೆದು ಮಗುವಿನ ಪೋಷಕರು ದರ್ಶನ್ ಮೇಲಿನ ಅಂಧಾಭಿಮಾನ ಮೆರೆದಿದ್ದರು. ಸಾಲದ್ದಕ್ಕೆ ಈ ಫೋಟೋವನ್ನು ವಾಟ್ಸಪ್ ಸ್ಟೇಟಸ್ ಗೂ ಹಾಕಿ ಸಂಭ್ರಮಿಸಿದ್ದರು. ಮಗುವನ್ನು ಖೈದಿ ರೀತಿ ಬಿಂಬಿಸಿದ ಪೋಷಕರ ವಿರುದ್ಧ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಕ್ಕಳ ಹಕ್ಕುಳ ಆಯೋಗ ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದು, ಪೊಲೀಸರ ಮೂಲಕ ಮಗುವಿನ ಪೋಷಕರ ಪತ್ತೆಗೆ ಮುಂದಾಗಿದೆ. ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ