Kannada NewsKarnataka News
ಘಟಸ್ಥಾಪನೆಯೊಂದಿಗೆ ಸವದತ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ

ಉಗರಗೋಳ(ತಾ.ಸವದತ್ತಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ನವರಾತ್ರಿ ಹಬ್ಬದ ಮೊದಲ ದಿನ ಘಟಸ್ಥಾಪನೆ ನೆರವೇರಿತು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಘಟಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗರ್ಭಗುಡಿ ಮುಂಭಾಗದಲ್ಲಿ ಅಳವಡಿಕೆ ಮಾಡಿರುವ ದೀಪಕ್ಕೆ ಎಣ್ಣೆ ಹಾಕಿದರು. ಬಳಿಕ ಭಕ್ತಾಧಿಗಳು ಸಾಲು ಸಾಲಾಗಿ ಬಂದು ಎಣ್ಣೆ ಹಾಕಿ, ನಮ್ಮ ಬದುಕು ದೀಪದ ಹಾಗೆ ಬೆಳಗುತ್ತಿರಲಿ ಎಂದು ಪ್ರಾರ್ಥಿಸಿದರು.
ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸವದತ್ತಿ ತಹಸೀಲ್ದಾರ್ ಎಂ.ಎನ್.ಮಠದ, ಆಶಾತಾಯಿ ಕೋರೆ, ಡಾ.ಪ್ರೀತಿ ದೊಡವಾಡ ಇತರರು ಇದ್ದರು.
ಮೊದಲ ದಿನವೇ ಸಾವಿರಾರು ಭಕ್ತರು ಯಲ್ಲಮ್ಮನ ಸನ್ನಿಧಿಗೆ ಆಗಮಿಸಿ, ಎಲ್ಲರ ಅಮ್ಮ ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.
ಸಂಬಂಧಿಸಿದ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ-



