Latest

*ಕೆ.ಎಫ್.ಸಿ.ಎಸ್.ಸಿ ವ್ಯವಸ್ಥಾಪಕ ಆತ್ಮಹತ್ಯೆ: ಕಾರಣ ನಿಗೂಢ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ವ್ಯವಸ್ಥಾಪಕ ಆರ್.ರವಿಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

59 ವರ್ಷದ ಆರ್.ರವಿಕುಮಾರ್ ತುಮಕೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುರುವೆಕೆರೆ ತಾಲೂಕಿನ ಎಲ್ಲಾ ಸೊಸೈಟಿ, ವಿವಿಧ ಹಾಸ್ಟೇಲ್, ಶಾಲೆಗಳಿಗೆ ಅಕ್ಕಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಗಟು ನಿರ್ವಾಹಕ ಅಧಿಕರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Home add -Advt

ಮಾಯಸಂದ್ರ ಬಳಿ ಬಾಡಿಗೆ ಮನೆಯಲ್ಲಿ ರವಿ ಕುಮಾರ್ ವಾಸವಾಗಿದ್ದರು. ಅವರ ಪತ್ನಿ ಹಾಗೂ ಕುಟುಂಬದವರು ತುಮಕೂರಿನಲ್ಲಿ ನೆಲೆಸಿತ್ತು. ಬೆಳಿಗ್ಗೆ ಕರೆ ಮಾಡಿದರೂ ರವಿಕುಮಾರ್ ಫೋನ್ ಸ್ವೀಕರಿಸುತ್ತಿರಲಿಲ್ಲ. ಗಾಬರಿಗೊಂಡ ಪತ್ನಿ ಹಾಗೂ ಮನೆಯವರು ರವಿಕುಮಾರ್ ವಾಸವಿದ್ದ ಮನೆಗೆ ಬಂದು ಬಾಗಿಲು ತೆಗೆದು ನೋಡಿದ್ದಾರೆ. ಈ ವೇಳೆ ರವಿಕುಮಾರ್ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ರವಿಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Related Articles

Back to top button