
ಪ್ರಗತಿವಾಹಿನಿ ಸುದ್ದಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 101ನೇ ಉಪಗ್ರಹ ಉಡಾವಣೆ ವಿಫಲಗೊಂಡಿದೆ. ಉಪಗ್ರಹದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮಿಷನ್ ವಿಫಲಗೊಂಡಿದೆ
ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಇಸ್ರೋ, ‘ಭೂ ವೀಕ್ಷಣಾ ಉಪಗ್ರಹ EOS-09 ಉಡಾವಣೆ ಯಶಸ್ವಿಯಾಯಿತು. ಆದರೆ EOS-09 ಉಪಗ್ರಹ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಂಸ್ಥೆ ನಡೆಸಿದ ಪ್ರಯತ್ನವು ವಿಫಲವಾಗಿದೆ’ ಎಂದು ತಿಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್ಎಲ್ವಿ -ಸಿ61 ರಾಕೆಟ್ ಹೊತ್ತು ಯಶಸ್ವಿಯಾಗಿ ಉಡಾವಣೆಗೊಂಡಿತು. ಆದರೆ, ಇದೀಗ 3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಒಎಸ್-09 ಉಪಗ್ರಹದ ಉಡಾವಣೆಯ 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಇದರಿಂದಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಮುಖ್ಯಸ್ತ ವಿ ನಾರಾಯಣನ್ ಹೇಳಿದ್ದಾರೆ.