Belagavi NewsBelgaum NewsKannada NewsKarnataka NewsLatestNationalPolitics

*ಜಾನಪದ ಪರಿಷತ್ತಿಗೆ ತಾಲೂಕ ಅಧ್ಯಕ್ಷರಾಗಿ ಭೀಮಾ ಲಮಾಣಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಬೆಳಗಾವಿ ತಾಲೂಕ ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷರಾಗಿ ಭೀಮಾ ಪಾಂಡಪ್ಪ ಲಮಾಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೋಹನ್ ಗಂಗಪ್ಪ ಗುಂಡ್ಲೂರು ಅವರು ತಿಳಿಸಿದ್ದಾರೆ. 

ಭೀಮಾ ಪಾಂಡಪ್ಪ ಲಮಾಣಿ ಅವರು ಬೆಳಗಾವಿ ತಾಲೂಕಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿ ಅನುಭವ ಇರುವ ಭೀಮಾ ಪಾಂಡಪ್ಪ ಲಮಾಣಿ ಬೆಳಗಾವಿ ತಾಲೂಕ ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದು ಸೂಕ್ತ , ಸಮಂಜಸ, ಯೋಗ್ಯ ಆಯ್ಕೆ ಎಂದು ತಿಳಿಸಿದ್ದಾರೆ. 

Home add -Advt

ಕನ್ನಡ ಜಾನಪದ ಪರಿಷತ್ತು ವಿಶೇಷವಾಗಿ ಜನಸಾಮಾನ್ಯರಲ್ಲಿ ಗ್ರಾಮೀಣ ಮತ್ತು ಶಹರ ಪ್ರದೇಶಗಳಲ್ಲಿಯ ಹುದುಗಿರುವ ಜಾನಪದ ಕಲೆ, ಸಾಹಿತ್ಯ, ಜಾನಪದ ಕಲೆಗಳ ಕ್ಷೇತ್ರಕಾರ್ಯ ದಾಖಲಿಕರಣ, ವೈಭವೀಕರಣ, ತರಬೇತಿ, ಸಹಕಾರ ತತ್ವದ ಅಡಿಯಲ್ಲಿ ಪ್ರಕಟಿಸುವುದು ವಸ್ತು ಸಂಗ್ರಹ, ಧ್ವನಿಮುದ್ರಣ, ಜಾನಪದ ವಿವಿಧ ಪ್ರಕಾರದ ಸೂಕ್ತ ಪ್ರತಿಭಾವಂತ, ಮಹತ್ವಕಾಂಕ್ಷೆಯ ಪ್ರತಿಭೆಗಳನ್ನು ಗುರುತಿಸುವುದು ಈ ಕನ್ನಡ ಜಾನಪದ ಪರಿಷತ್ತಿನ ಮೂಲ ಗುರಿ ಮತ್ತು ಉದ್ದೇಶವಾಗಿರುತ್ತದೆ. 

ಪ್ರತಿಭಾನ್ವಿತ ಮುಂಚೂಣಿಯಲ್ಲಿರುವ ಜಾನಪದದ ಯೋಗ್ಯ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡುವ ಕನ್ನಡ ಜಾನಪದ ಪರಿಷತ್ತಿನ ತತ್ವದಡಿಯಲ್ಲಿ ಕಲೆ, ಸಾಹಿತ್ಯ, ಜನಪರ ಕಲೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುವಲಾಗುವುದು ಎಂದು ಭೀಮಾ ಲಮಾಣಿ ಅವರು ತಿಳಿಸಿದ್ದಾರೆ.

Related Articles

Back to top button