Belagavi NewsBelgaum NewsKannada NewsKarnataka News

*ನಾಲ್ಕೈದು ದಿನ ಫ್ರೀ ಟೂರ್: ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025-26ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ದಿನಾಂಕ: 30-09-2025 ರಿಂದ 04-10-2025ರವರೆಗೆ ಪ್ರಯಾಣಿಸಲು ಹಾಗೂ ಹಿಂದಿರುಗಿ ಬರುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ದೀಕ್ಷಾಭೂಮಿ ಸಂದರ್ಶಿಸಲು ಬಯಸುವ ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ https://swd.karnataka.gov.in ಮೂಲಕ 9 ಸೆಪ್ಟೆಂಬರ್ 2025ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಕಛೇರಿ ಹಾಗೂ ತಾಲೂಕು ಮಟ್ಟದ ಕಛೇರಿಗಳಿಗೆ ಸಂಪರ್ಕಿಸಬಹುದಾಗಿದೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button