Film & EntertainmentLatestNational

*ಡ್ರಗ್ಸ್ ಪ್ರಕರಣ: ಮತ್ತೋರ್ವ ಖ್ಯಾತ ನಟಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಖ್ಯಾತ ನಟಿ ಸೇರಿ ಎಂಟು ಜನರನ್ನು ಬಂಧಿಸಿರುವ ಘಟನೆ ನಡೆದಿದೆ.

ತಮಿಳು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಂಜು ಕೃಷ್ಣ ಹಾಗೂ ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ.

ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್​​ನಲ್ಲಿ ನಟಿ ಸೇರಿದಂತೆ ಇತರರನ್ನು ಬಂಧಿಸಲಾಗಿದೆ.

Home add -Advt

ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಎಂಬಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಆತ ವೆಂಕಟೇಶ್ ಹೆಸರಿನ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಅಂಶ ತಿಳಿದು ಬಂದಿತ್ತು. ಬಳಿಕ ವೆಂಕಟೇಶ್ ಎಂಬಾತನನ್ನು ಪೊಲೀಸರೇ ಗ್ರಾಹಕನ ರೀತಿ ಸಂಪರ್ಕ ಮಾಡಿ, ಡ್ರಗ್ಸ್ ಮಾರುವಂತೆ ಹೇಳಿ, ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆತನ ಮಾಹಿತಿಯ ಮೇರೆಗೆ ಪೊಲೀಸರು ಇತರೆ ಕೆಲವರನ್ನು ಬಂಧಿಸಿದ್ದು, ಈ ವೇಳೆ, ನಟಿ ಅಂಜು ಕೃಷ್ಣ ಮತ್ತು ಸಹಾಯಕಿ ನಿರ್ದೇಶಕಿ ವಿನ್ಸಿ ನಿವೇತಾರನ್ನೂ ಬಂಧಿಸಲಾಗಿದೆ.


Related Articles

Back to top button