HealthKannada NewsKarnataka NewsPolitics

*ಖಾತೆ ಹಂಚಿಕೆಯಾದ ಒಂದೆ ಗಂಟೆಯಲ್ಲಿ ಆಸ್ಪತ್ರೆಗೆ ವಿಸಿಟ್ ಮಾಡಿದ ಆರೊಗ್ಯ ಸಚಿವ*

ಪ್ರಗತಿವಾಹಿನಿ ಸುದ್ದಿ: ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್‌ ಜಯನಗರದ ಸರ್ಕಾರಿ ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್ ಮಾಡಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಈ ವೇಳೆ ಗಮನಕ್ಕೆ ಬಂದಿದೆ. ಇನ್ನೂ ಇರುವ ಸಿಬ್ಬಂದಿ ಪೈಕಿ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಿಬ್ಬಂದಿ ಮೇಲೆ ಸಚಿವರು ಗರಂ ಆಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಆಸ್ಪತ್ರೆಯ ನೈಜವಾದ ಪರಿಸ್ಥಿತಿ ನೋಡಲು ಬಂದೆ. ಏನೆಲ್ಲಾ ಲೋಪದೋಷವಿದೆ ಎಂದು ನೋಡಿದ್ದೇನೆ. ಎಲ್ಲಾ ಕಡೆಯೂ ವಿಸಿಟ್ ಮಾಡಿದ್ದೇನೆ. ಇವತ್ತು ಇಬ್ಬರು ವೈದ್ಯರು ಗೈರಾಗಿದ್ದರು. ಅವ್ರಿಗೆ ಇಂದು ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು, ಕೆಲಸ ಮಾಡುವಂತೆ ಸೂಚಿಸುತ್ತೇನೆ. ಬೆಳಗ್ಗೆ ಹೊತ್ತಲ್ಲಿ ಬೇರೆ ಬೇರೆ ಕೆಲಸ, ಸಭೆಗಳು ಇರುತ್ತೆ. ಹೀಗಾಗಿ ಈ ಹೊತ್ತಲ್ಲಿ ಬಂದೆ. ಸರಿಯಾದ ಪಿಕ್ಚರ್ ಈ ಹೊತ್ತಲ್ಲೇ ಸಿಗೋದು. ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚು ಬರ್ತಾರೆ. ಎಷ್ಟೇ ಜನ ಬಂದ್ರೂ ವೈದ್ಯರು ನೋಡಬೇಕು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಹಾವಳಿ ವಿಚಾರವಾಗಿ ಇಂದು ಇಲಾಖೆಯ ಪರಿಶೀಲನಾ ಸಭೆಯಿದೆ. ಅಲ್ಲಿ ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಯಾವ ಸಲಹೆಗಳು ಇದ್ರೂ ಅದರ ಬಗ್ಗೆ ಚರ್ಚಿಸುತ್ತೇವೆ. ವೈದ್ಯರಿಗೂ ನಿರ್ಭಯವಾದ ವಾತಾವರಣ ಸೃಷ್ಟಿಯಾಗಬೇಕು ಎಂದರು.

Home add -Advt

Related Articles

Back to top button