Belagavi NewsBelgaum NewsCrimeKannada NewsKarnataka NewsNational

*ಜೈಲಿನಿಂದ ಬಿಡುಗಡೆಯಾದ ಶಿವಾನಂದ ನಿಲಣ್ಣವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಾವಿರಾರು ಕೋಟಿ ರೂ. ಪ್ರಕರಣದಲ್ಲಿ ಬಂಧನವಾಗಿದ್ದ ಶಿವಾನಂದ ನೀಲಣ್ಣವರ್‌ ಅವರಿಗೆ ಜಾಮೀನು ಮಂಜುರಾಗಿದ್ದು, ಇಂದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು.‌

ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದೆ.

ಮೇ 15ರಂದು ಮಾಳಮಾರುತಿ ಪೊಲೀಸರು ಶಿವಾನಂದ ನೀಲಣ್ಣವ‌ರ್ ಅವರನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಜೂನ್ 12ರಂದು ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಿಂದ ಅವರು ಬಿಡುಗಡೆಯಾದರು.

ನ್ಯಾಯಾಲಯ ಜಾಮೀನಿಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ಜೂನ್ 27ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಅಲ್ಲದೆ ಮೂರು ಲಕ್ಷ ರೂಪಾಯಿ ಬಾಂಡ್ ಶೂರಿಟಿ, ಓರ್ವ ಜಾಮೀನುದಾರರನ್ನು ಒದಗಿಸುವುದು, ತನಿಖಾಧಿಕಾರಿಗೆ ಸಹಕರಿಸುವುದು ಹಾಗೂ ದೇಶ ತೊರೆಯಬಾರದು ಎಂಬ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಲಾಗಿದೆ.

Home add -Advt

ಜೈಲಿನಿಂದ ಹೊರಬಂದ ಬಳಿಕ ಕ್ಯಾಮೆರಾಗಳ ಮುಂದೆ ಮಾತನಾಡಿದ ಶಿವಾನಂದ ನೀಲಣ್ಣವರ್, “ಓಂ ನಮಃ ಶಿವಾಯ..‌ ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನು ಹೇಳುವುದಿಲ್ಲ” ಎಂದು ಹೇಳಿ ತೆರಳಿದ್ದಾರೆ.

Related Articles

Back to top button