EducationKannada NewsLatest

*ಮುನ್ನಾಬಾಯಿ ಎಂಬಿಬಿಎಸ್ ನಂತೆ ನೀಟ್ ಪರೀಕ್ಷೆ ಬರೆಯಕು ಬಂದಿದ್ದ 9 ನಕಲಿ ವಿದ್ಯಾರ್ಥಿಗಳು ಸೇರಿ 30 ಜನರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ನೀಟ್ ಪರೀಕ್ಷೆ ಬರೆಯಲು ಆಗಮಿಸಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಪೊಲಿಸರು ಬಂಧಿಸಿರುವ ಘಟನೆ ಬಿಹಾರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ.

ನೀಟ್ ಮರುಪರೀಕ್ಷೆ ವೇಳೆ 9 ನಕಲಿ ಅಭ್ಯರ್ಥಿಗಳು ಮಾತ್ರವಲ್ಲ ಅವರೊಂದಿಗಿದ್ದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಲಖಿಸರಾಯ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದೆ. ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ 9 ನಕಲಿ ಅಭ್ಯರ್ಥಿಗಳು ಸೇರಿ 30 ಜನರನ್ನು ಪತ್ತೆಹಚ್ಚಿದೆ.

ಲಖಿಸರಾಯ್ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಸಿದ ತಪಾಸಣೆ ವೇಳೆ 30 ಜನ ಸಿಕ್ಕಿಬಿದ್ದಿದ್ದಾರೆ. ಈ ಪೈಕಿ 9 ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರೆ, ಇನ್ನುಳಿದ 21 ಜನರು ಈ ಪರೀಕ್ಷಾ ವಂಚನೆ ಜಾಲಕ್ಕೆ ಸಹಾಯ ಮತ್ತು ಅಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಅಧಿಕಾರಿಗಳು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರ ವಿಶೇಷ ತಂಡ ಈ ದಂಧೆಯ ಹಿಂದಿರುವ ಕಿಂಗ್‌ಪಿನ್‌ಗಳ ಪತ್ತೆಗಾಗಿ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಈ ಜಾಲದಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಮಾಹಿತಿ ಹೊರಬೀಳಲಿದೆ.

Home add -Advt

Related Articles

Back to top button