Kannada NewsKarnataka News
ಮಹಿಳೆ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಜಲ್ ಗಜಾನನ ಮಡಿವಾಳ ಎಂಬ ಮಹಿಳೆ ನಗರದ ಮಹಾದೇವ ರೋಡ್, ಕಂಗ್ರಾಳಿಯಲ್ಲಿರುವ ತಮ್ಮ ಮನೆಯಿಂದ ಜನವರಿ ೨೪ ರಂದು ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ಕಾಜಲ್ ಗಜಾನನ ಮಡಿವಾಳ (ವಯಸ್ಸು ೨೦ ವರ್ಷ), ಗೋದಿ ಕೆಂಪು ಮೈಬಣ್ಣ, ೫.೧ ಅಡಿ ಎತ್ತರ, ದುಂಡು ಮುಖ ಹೊಂದಿದ್ದಾರೆ ಹಾಗೂ ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾರೆ.
ಈ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ನಂಬರ್ ೦೮೩೧-೨೪೦೫೨೩೩ ನ್ನು ಸಂಪರ್ಕಿಸಬೇಕೆಂದು ಎ.ಪಿ.ಎಂ.ಸಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



