Belagavi NewsBelgaum NewsKannada NewsKarnataka News

*ಬೆಳಗಾವಿ ಪಾಲಿಕೆಯ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

28 ಸದಸ್ಯರ ಸ್ಥಾನಗಳಿಗೆ 28 ನಾಮಪತ್ರಗಳ ಸಲ್ಲಿಕೆಯಾಗಿತ್ತು. ಹೆಚ್ಚುವರಿಯಾಗಿ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿರಲಿಲ್ಲ ಮತ್ತು ಯಾರೂ ನಾಮಪತ್ರಗಳನ್ನು ಹಿಂಪಡೆಯಲಿಲ್ಲ ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಚುನಾವಣಾ ಅಧ್ಯಕ್ಷಾಧಿಕಾರಿಗಳಾಗಿದ್ದ ಕೆ.ಎಂ. ಜಾನಕಿ ಅವರು. ಪ್ರಕ್ರಿಯೆಗಳನ್ನು ನಡೆಸಿ ಸದಸ್ಯರ ಅವಿರೋಧ ಆಯ್ಕೆಯ ಘೋಷಣೆ ಮಾಡಿದರು.

Home add -Advt

ಆಯ್ಕೆಯಾದ ಸ್ಥಾಯಿ ಸಮಿತಿಗಳ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮೇಯರ್ ಪ್ರೀತಿ ಕಾಮಕರ ಅವರು, ನಮ್ಮ ನಗರ ಸೇವಕರ ಸಹಕಾರದಿಂದ ಯಾವುದೇ ಗೊಂದಲ ಅಸಮಾಧಾನಗಳಿಲ್ಲದೆ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಎಲ್ಲ ಸದಸ್ಯರೊಂದಿಗೆ ಸೇರಿ ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.  

ಉಪಮೇಯರ್ ಹಣಮಂತ ಕೊಂಗಾಲಿಯವರು ಮಾತನಾಡಿ, ಪಾಲಿಕೆ ಅಭಿವೃದ್ಧಿ ಕಾರ್ಯಗಳ ಗುಣಮಟ್ಟ ಆಧರಿಸಿ16ನೇ ಹಣಕಾಸು ಯೋಜನೆಯಲ್ಲಿ 34 ಕೋಟಿ ಅನುದಾನ ದೊರೆಯಲಿದೆ. ಅಭಿವೃದ್ಧಿಯ ಕಾರ್ಯಗಳನ್ನು ಗುರುತಿಸಿ ಕರ್ನಾಟಕದ ಏಳು ಮಹಾನಗರ ಪಾಲಿಕೆಗಳಲ್ಲಿ ನಮ್ಮ ಪಾಲಿಕೆಯು ಸ್ಮಾರ್ಟ್ ಸಿಟಿ,ಸಿಟೀಜ2 ಗೆ ಆಯ್ಕೆಯಾಗಿದ್ದು, ಅಭಿವೃದ್ಧಿಗಾಗಿ ಪ್ರತಿಯೊಂದು ವಾರ್ಡಿಗೆ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಯೋಜನೆಗಳ ಮೂಲಕ ನಗರದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸೇವಕರು, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗೀತಾ ಕೌಲಗಿ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಆಯ್ಕೆಯಾಗಿರುವ ಸ್ಥಾಯಿ ಸಮಿತಿಗಳ ಸದಸ್ಯರ ಪಟ್ಟಿ

ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲು ಸ್ಥಾಯಿ ಸಮಿತಿ 

ಬ್ರಹ್ಮಾನಂದ ಮಿರಜಕರ,ರಮೇಶ ಮೈಲುಗೋಳ, ದೀಪಾಲಿ ಟೊಪಗಿ, ಶಂಕರ ಪಾಟೀಲ, ರವಿರಾಜ ಸಾಂಬ್ರೇಕರ್, ಮೋದಿನಸಾಬ್ ಮತವಾಲೆ, ಬಸವರಾಜ ಮೋದಗೇಕರ.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:

ರಾಜು ಭಾತಕಾಂಡೆ, ಪ್ರೀಯಾ ಸಾತಗೌಡ, ರೂಪಾ ಚಿಕ್ಕಲದಿನ್ನಿ, ಶ್ರೀಶೈಲ್ ಕಾಂಬಳೆ, ನೇತ್ರಾವತಿ ಭಾಗವತ್, ಶಾಹಿದಖಾನ್ ಪಠಾಣ, ಶಾಹಮೋಬಿನ್ ಪಠಾಣ,

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ

ಶ್ರೇಯಸ್ ನಾಕಾಡಿ, ಸವಿತಾ ಪಾಟೀಲ, ಗಿರೀಶ ಧೋಂಗಡಿ, ಅಭಿಜಿತ್ ಜವಳಕರ, ಜಯಂತ ಜಾಧವ್, ಲಕ್ಷ್ಮಿ ಲೋಕ್ರಿ, ಖುರ್ಷಿದ್ ಮುಲ್ಲಾ.

ಲೆಕ್ಕಗಳ ಸ್ಥಾಯಿ ಸಮಿತಿ: 

ಸಾರಿಕಾ ಪಾಟೀಲ, ರೇಷ್ಮಾ ಕಾಮಕರ, ಮಾಧವಿ ರಾಘೋಚೆ, ಜಯತೀರ್ಥ ಸವದತ್ತಿ, ನಿತಿನ್ ಜಾಧವ, ಶಿವಾಜಿ ಮಂಡೋಳಕರ, ಅಪ್ರೋಜ್ ಮುಲ್ಲಾ.

Related Articles

Back to top button