Belagavi NewsBelgaum NewsKarnataka News
*ರಾಜಾ ಗಣೇಶ ಮೂರ್ತಿ ಆಗಮನ: ಬೆಳಗಾವಿಯಲ್ಲಿ ಈಗಿನಿಂದಲೇ ಆರಂಭವಾಗಿದೆ ಗಣೇಶ ಹಬ್ಬದ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ: ಕುಂದಾನಗರಿ ಬೆಳಗಾವಿಯಲ್ಲಿ ಹತ್ತು ದಿನಗಳಿಗೂ ಮೊದಲೇ ಗಣೇಶ ಹಬ್ಬದ ಸಂಭ್ರೆಅಮ-ಸಡಗರ ಆರಂಭವಾಗಿದೆ. ಬೆಳಗಾವಿ ನಗರದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲೆಡೆ ಭಕ್ತಿ, ಉತ್ಸಾಹ ಮನೆ ಮಾಡಿದೆ.
ಬೆಳಗಾವಿಯ ಪ್ರಮುಖ ಆಕರ್ಷಣೆಯಾದ ರಾಜಾ ಗಣೇಶ ಮೂರ್ತಿಯ ಆಗಮನವು ಚವಾಟ್ ಗಲ್ಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಈ “ಆಗಮನ ಸೋಳಾ” (ಆಗಮನ ಮೆರವಣಿಗೆ) ಕೇವಲ ಚವಾಟ್ ಗಲ್ಲಿಗೆ ಮಾತ್ರ ಸೀಮಿತವಾಗಿರದೆ, ಇಡೀ ಬೆಳಗಾವಿ ನಗರದ ಗೋವಾವೇಸ್, ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಸಾಗಿತು.
ಸಾವಿರಾರು ಭಕ್ತರು ರಾಜಾ ಗಣೇಶನನ್ನು ಭಕ್ತಿ ಭಾವದಿಂದ ಸ್ವಾಗತಿಸಿ, ಆಶೀರ್ವಾದ ಪಡೆದರು. ಈ ಬಾರಿಯ ಗಣೇಶೋತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ಹಾಗೂ ನಗರ ಸಜ್ಜಾಗಿದೆ.




