*ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ; ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು ಮಾಡಿರುವ ಧರಣಿ, ಅವರ ಸಚಿವ ಸಂಪುಟದ ಎಲ್ಲಾ ಸದಸ್ಯರು ಭಾಗವಹಿಸಿರುವಂತದ್ದು ಅತ್ಯಂತ ನಾಟಕೀಯವಾಗಿದ್ದು ಮತ್ತು ಆ ಫೇಕ್ ಮತದಾರರ ರಕ್ಷಣೆ ಮಾಡುವಂತಹ ಕುತಂತ್ರದ ಒಂದು ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್ ಐ ಆರ್ ಬಗ್ಗೆ ಮುಖ್ಯಮಂತ್ರಿಗಳಿಗೆ ಆಕ್ಷೇಪಣೆ ಇದ್ದರೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಇರುವಂತಹ ಅವರ ಬಿಎಲ್ ಟು ಮುಖಾಂತರ, ಬಿಎಲ್ ಒನ್ ಮುಖಾಂತರ ಆಕ್ಷೇಪಣೆ ಹಾಕಬಹುದು. ಎರಡನೆಯದಾಗಿ ಫಾರ್ಮ್ ನಂಬರ್ 7 ಕೊಟ್ಟಿರುವುದೇ ತಪ್ಪು ಮತದಾರರನ್ನ ಅಥವಾ ಕಳ್ಳ ಮತದಾರರನ್ನು ತೆಗಿಲಿಕ್ಕೆ ಮಾಡೋ ಸಲುವಾಗಿ ಒಬ್ಬರಿಗೆ 31 ಮತದಾರರ ಬಗ್ಗೆ ಆಕ್ಷೇಪಣೆ ಮಾಡುವುದಕ್ಕೆ ಚುನಾವಣೆ ಆಯೋಗ ಅಧಿಕಾರ ಕೊಟ್ಟಿದೆ. ಈಗ ಕೊಟ್ಟಿರುವ ಅಧಿಕಾರ ಬಳಕೆ ಮಾಡುವುದೇ ತಪ್ಪು ಅನ್ನೋ ರೀತಿಯಲ್ಲಿ ಮುಖ್ಯಮಂತ್ರಿಗಳ ವಾದ ಸರಿಯಲ್ಲ ಎಂದು ಹೇಳಿದ್ದಾರೆ.
ಎರಡನೆಯದಾಗಿ ಗುಂಪಾಗಿ ಆಗಿ ಕೊಟ್ಟಿರುವಂತಹ ಕೆಲವು ಪ್ರಕರಣಗಳಲ್ಲಿ ಅದನ್ನು ಯಾರು ಮಾಡಿದರು? ಯಾರು ಇಲ್ಲ? ತಾವೇ ಅದನ್ನ ಮಾಡಿಸಿ ಅದನ್ನು ಉಲ್ಲೇಖಿಸುವಂತಹ ಪ್ರಯತ್ನ ಮಾಡಿ. ಇಷ್ಟು ವರ್ಷ ಅವರು ಏನು ಆ ಫೇಕ್ ಮತದಾರರು, ಡುಪ್ಲಿಕೇಟ್ ಮತದಾರರು, ಸತ್ತವರ ಹೆಸರಲ್ಲಿ ಮತ ಹಾಕುವಂತಹ ಏನು ಪ್ರಯತ್ನ ಇದೆ, ಅದು ಎಸ್ ಐಆರ್ ಇಂದ ನಿಂತು ಹೋಗುತ್ತದೆ ಅನ್ನುವಂತಹ ಭಯದಿಂದ ನಿನ್ನೆ ಆ ನಾಟಕವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಚುನಾವಣೆ ಅಧಿಕಾರಿಗಳಿಗೆ ಹೇಳಲು ಇಷ್ಟ ಪಡ್ತೀನಿ, ಯಾವುದೇ ಒತ್ತಡಕ್ಕೆ ಮಣಿಯದೆ. ಚುನಾವಣೆಯ ಆಯೋಗ ಮತ್ತು ಇತರ ಕಾನೂನು ಅಡಿಯಲ್ಲಿ ತಾವು ನಿರ್ಭೀತಿಯಿಂದ, ನಿರ್ಭಯವಾಗಿ ಕೆಲಸವನ್ನ ಮಾಡಬೇಕು. ಯಾರು ತಪ್ಪು ಮಾಡುತ್ತಿದ್ದಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಯಾರು ಸರಿಯಾಗಿ ಚುನಾವಣೆ ಆಯೋಗದ ಕಾನೂನು ಅಡಿಯಲ್ಲಿ ಕೆಲಸವನ್ನು ಮಾಡ್ತಾ ಇದ್ದಾರೆ, ಅವರಿಗೆ ರಕ್ಷಣೆ ಕೊಡುವಂತದ್ದು ಕೂಡ ಅಷ್ಟೇ ಅವಶ್ಯಕತೆ ಇದೆ. ಇದನ್ನ ಚುನಾವಣೆ ಆಯೋಗ ನಡೆಸುತ್ತದೆ ಅನ್ನುವಂತಹ ವಿಶ್ವಾಸ ನನಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




