Kannada NewsKarnataka NewsLatestPolitics

*ಫಾರ್ಮ್-7 ಗೊಂದಲಕ್ಕೆ ತೆರೆ ಎಳೆದ ಚುನಾವಣಾಧಿಕಾರಿ ಅನ್ಬುಕುಮಾರ್*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಪ್ರಕ್ರಿಯೆ ವಿವಾದ ಹಾಗೂ ರಾಜ್ಯದಲ್ಲಿ ಎದ್ದಿರುವ ಫಾರ್ಮ್ -೭ ಗೊಂದಲ, ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನ್ಬುಕುಮಾರ್, ಫಾರ್ಮ್-೭ ನಿಂದ ಯಾವುದೇ ಮತದಾರ್ರ ಹೆಸರು ಡಿಲಿಟ್ ಆಗಿಲ್ಲ. ಹಾಗೆ ತಕ್ಷಣ ಮತದಾರ ಹೆಸರ್ ಡಿಲಿಟ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಒಂದು ದಿನಕ್ಕೆ 10 ಫಾರ್ಮ್ ಕೊಡಬಹುದು. ಬಿಎಲ್​ಎಗಳು ಒಟ್ಟು 50 ಫಾರ್ಮ್ ಕೊಡಬಹುದು. ಇದಕ್ಕೂ ಮೀರಿ ಫಾರ್ಮ್ ಬಂದರೆ ಇಆರ್​ಒ ನಿರ್ಧಾರ ಮಾಡುತ್ತಾರೆ. ಅದಕ್ಕಿಂತ ಹೆಚ್ಚು ಫಾರ್ಮ್ ಕೊಟ್ಟರೇ ಅಥವಾ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಬಹುದು. ಆದರೆ ಫಾರ್ಮ್-7 ಸಂಬಂಧ ಈವರೆಗೆ ಯಾವುದೇ ಕೇಸ್​ ದಾಖಲಾಗಿಲ್ಲ. ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದರೆ ಮೊದಲಿಗೆ ನೋಟಿಸ್ ನೀಡಲಾಗುತ್ತದೆ. ಬಳಿಕ ವಿಚಾರಣೆ ನಡೆಸಿದ ನಂತರ ಪಟ್ಟಿಯಿಂದ ಕೈಬಿಡಲಾಗುವುದು ಎಂದ ಹೇಳಿದರು.ಈ ಮೂಲಕ ಫಾರ್ಮ್​​-7 ದುರ್ಬಳಕೆ ಮಾಅಡಿಕೊಂಡು ಮತದಾರರ ಹೆಸರು ಡಿಲಿಟ್ ಎಂಬ ಆರೋಪಕ್ಕೆ ತೆರೆ ಎಳೆದರು.

ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ ಜಾರಿ ಆಗಿದೆ. ಈ ಪೈಕಿ 43,55,818 ನೋಟಿಸ್‌ಗಳು ವಿತರಣೆ ಆಗಿದೆ. ಇನ್ನೂ 26,495 ನೋಟಿಸ್‌ಗಳು ವಿತರಣೆ ಬಾಕಿ ಇದೆ. ವಿತರಿಸಿದ ನೋಟಿಸ್‌ ಪೈಕಿ 36,89,063 ಕೇಸ್​​ಗಳ​ವಿಚಾರಣೆ ಪೂರ್ಣಗೊಂಡಿವೆ. ಆಕ್ಷೇಪಣೆ ವಿಲೇವಾರಿಗೆ ಅಕ್ಟೋಬರ್​ 22ರಂದು ಕೊನೆಯ ದಿನಾಂಕ ಎಂದು ಅವರು ತಿಳಿಸಿದರು.

‘ಅರ್ಹರನ್ನು ಮತ್ತೊಮ್ಮೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತೇವೆ. ಈ ಬಗ್ಗೆ ವಿಶೇಷ ಜಾಗೃತಿ ಅಭಿಯಾನ ಮಾಡುತ್ತೇವೆ. ಅರ್ಹ ಮತದಾರರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲ್ಲ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ಆರಂಭವಾಗಲಿದೆ. ಫಾರ್ಮ್​ ನಂಬರ್ 6ನಲ್ಲಿ ಅಪ್ಲಿಕೇಶನ್ ಹಾಕಬಹುದು’ ಎಂದು ಅವರು ಮಾಹಿತಿ ನೀಡಿದರು.

ಫಾರ್ಮ್ ಸಲ್ಲಿಕೆ ವಿವರ:
ಬೆಂಗಳೂರಿನಲ್ಲಿ 1 ಲಕ್ಷ 10 ಸಾವಿರದ 594 ಫಾರ್ಮ್ 6 ಸಲ್ಲಿಸಲಾಗಿದೆ.
ಬೆಂಗಳೂರು ಉತ್ತರ 57111 ಹಾಗೂ ಬೆಂಗಳೂರು ದಕ್ಷಿಣ 40050
ಬೆಂಗಳೂರು ಕೇಂದ್ರದಲ್ಲಿ 42 ಸಾವಿರದ 83 ಫಾರ್ಮ್ 6 ಸಲ್ಲಿಸಲಾಗಿದೆ.
ಬೆಂಗಳೂರು ನಗರದಲ್ಲಿ ಈವರೆಗೆ 1401 ಫಾರ್ಮ್ 6A ಸಲ್ಲಿಸಲಾಗಿದೆ.
ಬೆಂಗಳೂರು ಉತ್ತರ 790 ಮತ್ತು ಬೆಂಗಳೂರು ದಕ್ಷಿಣದಲ್ಲಿ 380 ಫಾರ್ಮ್ 6A ಸಲ್ಲಿಸಲಾಗಿದೆ.
ಬೆಂಗಳೂರು ಕೇಂದ್ರದಲ್ಲಿ ಈವರೆಗೆ 360 ಫಾರ್ಮ್ 6A ಸಲ್ಲಿಸಲಾಗಿದೆ.
ಬೆಂಗಳೂರು ನಗರದಲ್ಲಿ ಈವರೆಗೂ ಒಟ್ಟು 3365 ಫಾರ್ಮ್ 7 ಸಲ್ಲಿಕೆ ಆಗಿದೆ.
ಬೆಂಗಳೂರು ಉತ್ತರ 1842 ಮತ್ತು ಬೆಂಗಳೂರು ದಕ್ಷಿಣ 1707 ಫಾರ್ಮ್ 7 ಸಲ್ಲಿಕೆ.
ಬೆಂಗಳೂರು ಕೇಂದ್ರದಲ್ಲಿ ಈವರೆಗೂ 1659 ಫಾರ್ಮ್ 7 ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button