*ಮತ್ತೊಂದು ಹೆಲಿಕಾಪ್ಟರ್ ಪತನ: ಸರೋವರದಲ್ಲಿ ಬಿದ್ದು ದುರಂತ: ಪೈಲಟ್ ಸೇರಿ ಇಬ್ಬರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಹೆಲಿಕಾಪ್ಟರ್ ವೊಂದು ಅಮೆರಿಕದ ಗ್ವಾಟೆಮಾಲಾದ ಲೇಕ್ ಅಟಿಟ್ಲಾನ್ ಸರೋವರಕ್ಕೆ ಅಪ್ಪಳಿಸಿದ್ದು ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಳೆಯ ವಾತಾವರಣದ ನಡುವೆ ಹೆಲಿಕಾಪ್ಟರ್ ಸಂಚರಿಸುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಸರೋವರದಲ್ಲಿ ಬಿದ್ದಿದೆ. ಇದರಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಐವರನ್ನು ರಕ್ಷಿಸಲಾಗಿದೆ. ಪೈಲಟ್ ಹಾಗೂ ಓರ್ವ ಪ್ರಯಾಣಿಕ ನಾಪತ್ತೆಯಾಗಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಹೆಲಿಕಾಪ್ಟರ್ ಸ್ಥಳೀಯ ಸಮಯ ಮಧ್ಯಾಹ್ನ 12:11ಕ್ಕೆ ಲಾ ಅರೋರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಅಟಿಟ್ಲಾನ್ ಸರೋವರದ ಉತ್ತರ ಭಾಗದಲ್ಲಿರುವ ಹೋಟೆಲ್‌ನತ್ತ ಪ್ರಯಾಣ ಬೆಳೆಸಿತ್ತು. ಇದು 30 ನಿಮಿಷಗಳ ಪ್ರಯಾಣವಾಗಿತ್ತು. ಅಷ್ಟರಲ್ಲಿ ವಿಮಾನ ಪತನವಾಗಿದೆ ಎಂದು ಗ್ವಾಟೆಮಾಲಾ ನಾಗರಿಕ ವಾಯುಯಾನ ನಿರ್ದೇಶನಾಲಯ (DGAC) ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




