*ನಿಸರ್ಗಮನೆಗೆ ರಾಷ್ಟ್ರೀಯ ಮಾನ್ಯತೆ*: *ಸಂತಸ ತಂದ ಸಂಗತಿ*: *ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಶಿರಸಿಯ ಡಾ. ವೆಂಕಟರಮಣ ಹೆಗಡೆ ಅವರ ನಿಸರ್ಗಮನೆ ವೇದ ವೆಲ್ನೆಸ್ ಸೆಂಟರ್ಗೆ ರಾಷ್ಟ್ರೀಯ ಮಟ್ಟದ ಎನ್ಎಬಿಎಚ್ ಸಂಸ್ಥೆಯಿಂದ ಮಾನ್ಯತಾ ಪ್ರಮಾಣಪತ್ರ ಲಭಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಆಯುರ್ವೇದ, ಪಂಚಕರ್ಮ, ಪ್ರಕೃತಿ ಹಾಗೂ ಯೋಗ ಸೇರಿದಂತೆ ಪರಿಸರಸ್ನೇಹಿ ಚಿಕಿತ್ಸಾ ವಿಧಾನಗಳನ್ನು ಒಂದೇ ಸೂರಿನಡಿ ಒದಗಿಸುತ್ತಿರುವ ಡಾ. ವೆಂಕಟರಮಣ ಹೆಗಡೆ ಹಾಗೂ ಅವರ ಬಳಗದ ಸೇವೆ ಶ್ಲಾಘನೀಯವಾಗಿದೆ. ನಿಸರ್ಗಮನೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದವರು ಆರೋಗ್ಯ ಸುಧಾರಿಸಿಕೊಂಡು ನಿರೋಗಿಗಳಾಗಿ ಮರಳುವುದನ್ನು ನಮ್ಮ ಅನುಭವದಲ್ಲಿಯೂ ಕಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಸೇವೆಯಲ್ಲಿ ಗುಣಮಟ್ಟ ಹಾಗೂ ವಿಶ್ವಾಸಕ್ಕೆ ಆದ್ಯತೆ ನೀಡುತ್ತಿರುವ ನಿಸರ್ಗಮನೆಗೆ ರಾಷ್ಟ್ರೀಯ ಮಾನ್ಯತೆ ದೊರೆತಿರುವುದು ಸಂಸ್ಥೆಯ ಸೇವೆಗೆ ಸಂದ ಗೌರವವಾಗಿದೆ. ಈ ಸಾಧನೆಗಾಗಿ ಡಾ. ವೆಂಕಟರಮಣ ಹೆಗಡೆ ಹಾಗೂ ಅವರ ಇಡೀ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




