CrimeKannada NewsKarnataka News

*ಪಬ್ ನಲ್ಲಿ ಲೈಟರ್ ಕೇಳಿದಾಗ ಪರಿಚಯನಾದ ಯುವಕ*: *ಹೋಟೆಲ್ ನಲ್ಲಿ ಯುವತಿ ಮೇಲೆ ಅತ್ಯಾಚಾರ*: *ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆ. ಪಬ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವತಿ ಮೇಲೆ ಯುವಕ ಅತ್ಯಾಚಾರವೆಸಗಿ ಪರಾರುಯಾಗಿರುವ ಘಟನೆ ನಡೆದಿದೆ.

ಆರೋಪಿಯು ಯುವತಿಯನ್ನು ಹೋಟೆಲ್ ಕೊಠಡಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಸದ್ಯ, ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರು ಕೋರಮಂಗಲದ ಪಬ್ ನಲ್ಲಿ ಲೈಟರ್ ಕೇಳುಇದಾಗ ಪರಿಚಯನಾದ ಯುವಕನೊಂದಿಗೆ ಸ್ನೇಹ ಮಾಡಿದ್ದೇ ಮುಳುವಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಡಿವಾಳ ಪೊಲೀಸರು ಸಮೀರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ದೂರಿನ ಪ್ರಕಾರ, ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿ ಕೋರಮಂಗಲದ ಪಬ್‌ಗೆ ತೆರಳಿದ್ದರು. ಈ ವೇಳೆ ಸಿಗರೇಟ್ ಸೇದಲು ಸಮೀರ್ ಬಳಿ ಲೈಟರ್ ಕೇಳಿದ್ದರು. ಲೈಟರ್ ನೀಡಿದ ಆರೋಪಿ, ಬಳಿಕ ಯುವತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಮಾತುಗಳ ಮೂಲಕ ಯುವತಿಯನ್ನು ಸೆಳೆದು ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಸಮೀರ್, ನಂತರ ಆಕೆಯನ್ನು ಮಡಿವಾಳದ ಹೋಟೆಲ್‌ನ ಕೊಠಡಿಗೆ ಆಹ್ವಾನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹೋಟೆಲ್ ಕೊಠಡಿಯಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಆರೋಪಿಯು ಯುವತಿಗೆ ನಶೆ ಬರುವಂತೆ ಕುಡಿಸಿ, ಆಕೆ ಕುಡಿದ ಮತ್ತಿನಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯ ನಂತರ ಯುವತಿ ಬೆಳಗಿನ ಜಾವ ಹೋಟೆಲ್‌ನಿಂದ ಹೊರಬಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಸಮೀರ್‌ನನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

Related Articles

Back to top button