
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15,000 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಬಲಪಡಿಸಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ₹10,000 ಕೋಟಿ ಮೀಸಲಿಟ್ಟಿದ್ದು, ಯೋಜನೆ ಎಲ್ಲ 31 ಜಿಲ್ಲೆಗಳಿಗೆ ಅನ್ವಯವಾಗಲಿದೆ ಹಾಗೂ ಕಾಮಗಾರಿಗಳನ್ನು 15 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಹಂಚಿದ ಯೋಜನೆಯ ಮುಖ್ಯಾಂಶಗಳು ತಿಳಿಸಿವೆ.
• ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು 10,000 ಕೋಟಿ ಅನುದಾನ ಮೀಸಲು.
• ಸುಮಾರು 15,000 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಬಲಪಡಿಸಿ ಮೇಲ್ದರ್ಜೆಗೇರಿಸುವುದು.
• ಹಾಳಾಗಿರುವ ಡಾಂಬರು ರಸ್ತೆಗಳನ್ನು ಸದೃಢ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲು ರೂ. 7,000 ಕೋಟಿ ವಿನಿಯೋಗ.
• ಪ್ರಮುಖ ಗ್ರಾಮೀಣ ರಸ್ತೆಗಳ ಮರುಡಾಂಬರೀಕರಣ ಮತ್ತು ಅವುಗಳ ಬಾಳಿಕೆ ಅವಧಿಯನ್ನು ಹೆಚ್ಚಿಸಲು 3,000 ಕೋಟಿ ಮೀಸಲು.
• ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಯೋಜನೆ ಅನ್ವಯವಾಗಲಿದ್ದು, ಈಗಾಗಲೇ ಜಿಲ್ಲಾವಾರು 7,775 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.
• ಜಿಲ್ಲಾವಾರು ಹಂಚಿಕೆಯಲ್ಲಿ ಬೆಳಗಾವಿಗೆ 650 ಕೋಟಿ, ತುಮಕೂರಿಗೆ 425 ಕೋಟಿ, ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಿಗೆ ತಲಾ 350 ಕೋಟಿ ಅನುದಾನ ನೀಡಲಾಗಿದೆ.
• ವಿಶೇಷ ಅಗತ್ಯವಿರುವ ಪ್ರದೇಶಗಳಲ್ಲಿನ ಆದ್ಯತೆಯ ಕಾಮಗಾರಿಗಳಿಗಾಗಿ 2,225 ಕೋಟಿ ಮೀಸಲಿಡಲಾಗಿದೆ.
• ಪ್ರತಿ ವಿಧಾನಸಭಾ ಕ್ಷೇತ್ರದ ಹಿತಾಸಕ್ತಿಯ ರಕ್ಷಣೆ: ಯಾವುದೇ ಕ್ಷೇತ್ರದ ಅನುದಾನದ ಪಾಲು ಅಥವಾ ರಸ್ತೆಯ ಉದ್ದವನ್ನು ಕಡಿತಗೊಳಿಸಲಾಗುವುದಿಲ್ಲ ಹಾಗೂ ಸ್ಥಳೀಯ ಶಾಸಕರ ಒಪ್ಪಿಗೆಯ ಮೇರೆಗೆ ಕಾಮಗಾರಿಗಳನ್ನು ಆಯ್ಕೆ ಮಾಡಲಾಗುವುದು.
• ಕಾನೂನುಬದ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲಾಗುವುದು.
• ಜನಸಂಖ್ಯೆ, ಕೃಷಿ ಚಟುವಟಿಕೆಗಳು, ಮಾರುಕಟ್ಟೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸಾರಿಗೆ ಕೇಂದ್ರಗಳಿಗೆ ಸಂಪರ್ಕದ ಕಲ್ಪಿಸುವ ಆಧಾರದ ಮೇಲೆ ರಸ್ತೆಗಳ ಆಯ್ಕೆ.
• ನ್ಯಾಯಾಲಯಗಳು, ಲೋಕಾಯುಕ್ತ ಮತ್ತು ಶಾಸಕಾಂಗ ಸಮಿತಿಗಳ ಮುಂದೆ ಬಾಕಿ ಇರುವ ರಸ್ತೆ ಹಾಗೂ ಸೇತುವೆ ಕಾಮಗಾರಿಗಳು ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಕಾಮಗಾರಿಗಳಿಗೆ ಮೊದಲ ಆದ್ಯತೆ.
• ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕವಾಗಿ ಟೆಂಡರ್ ಕರೆದು 15 ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ.
• ಪ್ರತಿಯೊಂದು ಕಾಮಗಾರಿಯಲ್ಲೂ ಮೂರು ವರ್ಷಗಳ ನಿರ್ವಹಣೆ ಅವಧಿ ಕಡ್ಡಾಯ.
• ಪ್ರತಿಯೊಂದು ಕಾಮಗಾರಿಯ ಮುನ್ನ ಮತ್ತು ನಂತರದ ಜಿಪಿಎಸ್ (GPS) ಟ್ಯಾಗ್ ಮಾಡಿದ ಫೋಟೋ ಮತ್ತು ವಿಡಿಯೋ ದಾಖಲೀಕರಣ ಹಾಗೂ ಪ್ರತಿ ರಸ್ತೆಗೆ ಮೂರು ಬಾರಿ ತಪಾಸಣೆ.
• 5 ಕಿ.ಮೀ.ಗಿಂತ ಹೆಚ್ಚು ಉದ್ದವಿರುವ ಎಲ್ಲಾ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಅಳವಡಿಕೆ.
ಯೋಜನೆಯ ಮೂಲಕ “ಪ್ರತಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಉತ್ತಮ ರಸ್ತೆ” ಎನ್ನುವುದು ಸಿಎಂ ಡಿ ಕೆ ಶಿವಕುಮಾರ್ ಅವರ ವಾಗ್ದಾನವಾಗಿದೆ.



