Latest

ವಂಚನೆ ಆರೋಪ ನಿರಾಕರಿಸಿದ ಸನ್ನಿ ಲಿಯೋನ್

ಪ್ರಗತಿವಾಹಿನಿ ಸುದ್ದಿ; ಎರ್ನಾಕುಲಂ: ಬಟ್ಟೆ ಅಂಗಡಿ ಉದ್ಘಾಟನೆಗೆಂದು 29 ಲಕ್ಷ ರೂ ಪಡೆದುಕೊಂಡಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೊನೇಕ್ಷಣದಲ್ಲಿ ಉದ್ಘಾಟನೆಗೆ ಬಾರದೇ ಕೈಕೊಟ್ಟಿದ್ದು, ಹಣವನ್ನೂ ವಾಪಸ್ ನೀಡದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ವಿರುದ್ಧ ಆರ್ಥಿಕ ವಂಚನೆ ಪ್ರಕರಣ ದಾಖಲಾಗಿದ್ದು, ಕೇರಳದ ಅಪರಾಧ ಪತ್ತೆ ದಳ ಪೊಲೀಸರು ಪ್ರಕರಣ ಸಂಬಂಧ ಸನ್ನಿ ನಿಯೋನ್ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.

ಆದರೆ ಸನ್ನಿ ಲಿಯೋನ್ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ತಾವು 29 ಲಕ್ಷ ರೂ ವಂಚನೆ ಮಾಡಿಲ್ಲ ಎಂದು ಹೇಳಿದ್ದಾರೆ. 2019ರ ಫೆ.14 ರಂದು ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಸನ್ನಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Related Articles

Back to top button