Latest

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ; 48 ಅಡಿಯ ರಾಮಸೇತು ಕೇಕ್ ಸಿದ್ಧಪಡಿಸಿದ ಬೇಕರಿ

ಪ್ರಗತಿವಾಹಿನಿ ಸುದ್ದಿ; ಸೂರತ್: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಎಲ್ಲರೂ ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಗುಜರಾತ್ ನ ಬೇಕರಿಯೊಂದು ವಿಶೇಷವಾಗಿ ರಾಮಸೇತು ನಿರ್ಮಾಣ ಮಾದರಿಯಲ್ಲಿ ಬರೋಬ್ಬರಿ 48 ಅಡಿ ಉದ್ದದ ಕೇಕ್ ತಯಾರಿಸಿ ಒಂದು ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷ.

ಗುಜರಾತ್ ನ ಬ್ರೆಡ್ ಲೈನರ್ ಎಂಬ ಬೇಕರಿ ಸಿಬ್ಬಂದಿ 48 ಅಡಿ ಉದ್ದದ ರಾಮಸೇತು ಕೇಕ್ ತಯಾರಿಸಿದ್ದು, ಸೇತುವೆ ನಿರ್ಮಾಣಕ್ಕೆ ವಾನರ ಸೇನೆ ಬಂಡೆಗಳನ್ನು ಹೊತ್ತುಕೊಂಡು ಹೋಗುತ್ತಿರುವ ಮಾದರಿಯಲ್ಲಿ ಕೇಕ್ ಸಿದ್ಧಪಡಿಸಿದ್ದಾರೆ.

ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕಾಗಿ 101111 ರೂ ದೇಣಿಗೆಯ ಚೆಕ್ ಹಸ್ತಾಂತರ ಮಾಡಿದರು.

Home add -Advt

Related Articles

Back to top button