Kannada NewsKarnataka NewsLatest
ಮನೆಗೆ ಮರಳಿದ ಮದನಕುಮಾರ ಭೈರಪ್ಪನವರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದು ಬೆಳಗ್ಗೆ ಅಪಹರಣಕ್ಕೊಳಗಾಗಿದ್ದ ಇಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ, ಶೃತಿ ಕನ್ಸ್ಟ್ರಕ್ಷನ್ ಮಾಲಿಕ ಮದನ್ ಕುಮಾರ ಭೈರಪ್ಪನವರ್ ಪತ್ತೆಯಾಗಿದ್ದು, ಮನೆಗೆ ಮರಳಿದ್ದಾರೆ.
ಇಂದು ಬೆಳಗ್ಗೆ ಮನೆಯಿಂದ ಕಚೇರಿಗೆ ಹೊರಟಿದ್ದ ಸಂದರ್ಭದಲ್ಲಿ 3 -4 ಜನ ಕಾರಿನಲ್ಲಿ ಬಂದು ಅವರನ್ನು ಕಾರು ಸಮೇತ ಅಪಹರಿಸಿದ್ದರು. ನಂತರ ಅವರ ಕಾರನ್ನು ಕಾಕತಿ ಬಳಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದರು.
ಈ ಕುರಿತು ಪೊಲೀಸ್ ದೂರು ದಾಖಲಿಸಲಾಗಿತ್ತು. ಇದೀಗ ಮದನ್ ಕುಮಾರ ಮನೆಗೆ ಮರಳಿದ್ದಾರೆ. ನಾನೂ ಅವರ ಮನೆಗೆ ಹೋಗುತ್ತಿದ್ದೇನೆ. ಹೋದ ನಂತರ ಸಂಪೂರ್ಣ ವಿವರ ಗೊತ್ತಾಗಲಿದೆ ಎಂದು ಅವರ ಸೋದರ ಮಾವ, ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಕರೆಯನ್ನು ಮದನ್ ಕುಮಾರ ಕರೆ ಸ್ವೀಕರಿಸಲಿಲ್ಲ.
ಮದನಕುಮಾರ ಭೈರಪ್ಪನವರ್ ಅಪಹರಣ: ಬೆಳಗಾವಿಯಲ್ಲಿ ತಲ್ಲಣ



