Kannada NewsKarnataka News
ಬೆಳಗಾವಿ ಬಳಿ ಗುಂಪು ಘರ್ಷಣೆ: ಓರ್ವ ಸಾವು, 7 ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಗೆ ಸಮೀಪದ ಕರಡಿಗುಡ್ಡದ ಬಳಿ ಗುಂಪು ಘರ್ಷಣೆ ನಡೆದಿದ್ದು, ಓರ್ವ ಯುವಕ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ 7 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಮುದಕಪ್ ಅಂಗಡಿ ಎನ್ನುವ 25 ವರ್ಷದ ಯುವಕ ಮೃತನಾಗಿದ್ದಾನೆ. ವಿಠ್ಠಲ, ಸುನೀಲ್, ಲಕ್ಕಪ್ಪ,ಬರ್ಮಾಜ್, ವಿಶಾಲ ಮೊದಲಾದವರು ಗಾಯಗೊಂಡಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ತಮ್ಮನನ್ನು ಕಡಿದು ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ




