ಖ್ಯಾತ ನಟನಿಗೆ ಗೆಟ್ ಔಟ್ ಎಂದ ಟಿವಿ ನಿರೂಪಕಿ: ನೆಟ್ಟಿಗರಿಂದ ಆಕ್ರೋಶ

ಪ್ರಗತಿ ವಾಹಿನಿ ಸುದ್ದಿ ಹೈದರಾಬಾದ್  –
ಖ್ಯಾತ ತೆಲಗು ನಟ ವಿಶ್ವಕ್ ಸೇನ್ ಅವರಿಗೆ ಟಿವಿ ವಾಹಿನಿಯೊಂದರ ನಿರೂಪಕಿ ಚರ್ಚೆಯ ವೇಳೆಯೇ ಶೋ ದಿಂದ ಗೆಟ್ ಔಟ್ ಎಂದಿದ್ದು ಚರ್ಚೆಗೆ ಗ್ರಾಸವಾಗಿದೆ.
ಗಂಭೀರ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ನಟ ವಿಶ್ವಕ್ ಸೇನ್ ತನ್ನನ್ನು ಮಾನಸಿಕ ಖಿನ್ನತೆಯುಳ್ಳ ಮನುಷ್ಯ ( ಡಿಪ್ರೆಸ್ಡ್ ಮ್ಯಾನ್ ) , ಪಾಗಲ್ ಸೇನ್ ಎಂದು ನಿರೂಪಕಿ ಉಲ್ಲೇಖಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
   ಈ ವೇಳೆ ನಿರೂಪಕಿ ಮತ್ತು ವಿಶ್ವಕ್ ಸೇನ್ ವಿರುದ್ಧ ಮಾತಿನ ಚಕಮಕಿ ತೀವ್ರಗೊಂಡಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು‌. ಬಳಿಕ ನಿರೂಪಕಿ ವಿಶ್ವಕ್ ಸೇನ್ ಗೆ ಶೋ ದಿಂದ ಹೊರಹೋಗುವಂತೆ ಕೈ ತೋರಿಸಿ ಗೆಟ್ ಔಟ್ ಎಂದು ಜೋರಾಗಿ ಕಿರುಚಿದ್ದಾರೆ. ಸಿಟ್ಟಿಗೆದ್ದ ವಿಶ್ವಕ್ ಸೇನ್ ಅಶ್ಲೀಲ ಪದ ಬಳಸಿ ಬಯ್ದು ಶೋ ದಿಂದ ಹೊರ ನಡೆದಿದ್ದಾರೆ.
    ಈ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಬಹುತೇಕ  ನೆಟ್ಟಿಗರು ವಿಶ್ವಕ್ ಸೇನ್ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button