Belagavi NewsBelgaum NewsKannada NewsKarnataka News

ಕೌಂಟುಬಿಕ ಕಲಹ ಹಿನ್ನೆಲೆ :ಯೋಧನ ಪತ್ನಿ ಆತ್ಮಹತ್ಯೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೌಂಟುಬಿಕ ಕಲಹ ಹಿನ್ನಲೆ ಯೋಧನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಾಳು ಎಂಬಾತ ಅರುಣಾಚಲಪ್ರದೇಶದ ಗ್ಯಾಂಟುಕ್ ನಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

Home add -Advt

ತನ್ನ ಮಡದಿ ಹಾಗೂ ಎರಡು ಮಕ್ಕಳನ್ನ ಇಲ್ಲಿಯೇ ಬಿಟ್ಟು ಹೋದ ಯೋಧ ಬಾಳುವಿನ ತಾಯಿಯ ಕಾಟದಿಂದ ಬೆಸತ್ತ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮೋಳೆ ಗ್ರಾಮದ ನಿವಾಸಿ ರೂಪಾಬಾಯಿ ಬಾಳು ರೂಪನವರ (31) ಮೃತ ದುರ್ದೈವಿಯಾಗಿದ್ದು ಈಗ ಎರಡು ಮಕ್ಕಳನ್ನ ತಬ್ಬಲಿ ಮಾಡಿದ್ದಾಳೆ.

ಬಾಳು ತಾಯಿ (ಮೃತ ರೂಪಾಬಾಯಿ ಅತ್ತೆ) ಸೇವಂತಾ ಸಿದರಾಯ ರೂಪನವರ ಅವರಿಂದ ದಿನಂಪ್ರತಿ ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button