Kannada NewsKarnataka News
ನದಿಯಲ್ಲಿ ತೇಲಿ ಬಂತು ಅಪರಿಚಿತ ಶವ
ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) – ಗ್ರಾಮದ ಮುತ್ಯಾನ ಗುಡಿಸಲ ಹತ್ತಿರ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲಿ ಬಂದಿದೆ. ಸುಮಾರು 55 ವರ್ಷದ ವ್ಯಕ್ತಿಯ ಶವ ಇದಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಸೆಳೆತಕ್ಕೆ ಶವ ತೇಲಿ ಬಂದಿದ್ದು, ನೀರು ಕಡಿಮೆಯಾಗಿದ್ದರಿಂದ ಪತ್ತೆಯಾಗಿದೆ.
ಇದನ್ನು ಗ್ರಾಮದ ಯುವಕರು ಗಮನಿಸಿ ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವ್ಯಕಿಯು ಗೊದಿ ಬಣ್ಣ ಹೊಂದಿದ್ದು, ಬಿಳಿ ಅಂಗಿ, ದೋತಿ ತೊಟ್ಟಿದ್ದರು. ಕೂದಲು ಬಿಳಿಯಾಗಿದೆ. ಪೊಲೀಸ್ ಇಲಾಖೆ ಹಾಗೂ ಗ್ರಾಮದ ಯುವಕರು ನಂದೇಶ್ವರ ಗ್ರಾಮದ ರುದ್ರ ಭೂಮಿಯಲ್ಲಿ ಶವದ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಅಥಣಿ ಪೊಲೀಸ್ ಠಾಣೆ ಪಿ.ಎಸ್.ಐ ಯು.ಎಸ್ .ಅವಟಿ ಹಾಗೂ ಸಿಬ್ಬಂದಿ ಮುಂಜಾನೆಯಿಂದ ಸಂಜೆಯವರೆಗೂ ಸ್ಥಳದಲ್ಲಿದ್ದು ಶವ ಪರೀಕ್ಷೆ ಮಾಡಿಸಿ ಅಂತ್ಯ ಸಂಸ್ಕಾರ ಮಾಡಿಸಿದರು.



